ಕಲಬುರಗಿ| ಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಜಗನ್ನಾಥ ತರನಳ್ಳಿ ಆಯ್ಕೆ: ವಿಜಯಕುಮಾರ ತೇಗಲತಿಪ್ಪಿ

Date:

Share post:

ಕಲಬುರಗಿ: ವರ್ತಮಾನದ ಸಾಹಿತ್ಯ ಕುರಿತು ಚರ್ಚೆ ಮತ್ತು ಚಿಂತನೆ ಮಾಡುವ ದಿಸೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜುಲೈ ಮಾಸಾಂತ್ಯಕ್ಕೆ ಹಮ್ಮಿಕೊಳ್ಳಲುದ್ದೇಶಿಸಿರುವ ಕಲಬುರಗಿ ಜಿಲ್ಲಾ 2ನೇ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸೇಡಂ ನ ಬರಹಗಾರ – ಸಾಹಿತಿ-ಪತ್ರಕರ್ತ ಡಾ. ಜಗನ್ನಾಥ ಎಲ್ ತರನಳ್ಳಿ ಅವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಇಂದಿನ ಯುವ ಬರಹಗಾರರಿಗೆ ಪ್ರೋತ್ಸಾಹಿಸಲು ಹಾಗೂ ಸಾಹಿತ್ಯದ ಅಭಿರುಚಿಯನ್ನು ಬೆಳೆಸಲು ಈ ಸಮ್ಮೇಳನ ಪೂರಕವಾಗಲಿದೆ. ಕಳೆದ ಮೂರು ವರ್ಷಗಳಿಂದ ವಿಭಿನ್ನ ಹಾಗೂ ಪ್ರಪ್ರಥಮ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಹೊಸ ಪರಂಪರೆಯೊoದನ್ನು ಸಾಹಿತ್ಯ ಲೋಕದಲ್ಲಿ ಹುಟ್ಟು ಹಾಕುವಂತಾಗಿದೆ.

 

ಜಿಲ್ಲೆಯಲ್ಲಿ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಸಾಧನೆಗೈದ ಅದೇಷ್ಟೋ ಪ್ರತಿಭೆಗಳು ತೆರೆಮರೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಅದರಲ್ಲಿ ಸಾಹಿತಿ ಡಾ. ಜಗನ್ನಾಥ ತರನಳ್ಳಿ ಅವರು ಒಬ್ಬರಾಗಿದ್ದಾರೆ. ಹಾಗಾಗಿ ಇಂಥ ಯುವ ಸಾಹಿತ್ಯ ಸಮ್ಮೇಳನ ಏರ್ಪಡಿಸುವ ಮೂಲಕ ನಾಡಿನ ಅನೇಕ ಕವಿ-ಕಲಾವಿದ, ಸಾಹಿತಿಗಳನ್ನು ಪರಿಚಯಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದು ವಿವರಿಸಿದರು.

ಯುವ ಸಮುದಾಯದ ಸಾಮಾಜಿಕ ಬದುಕಿನ ಸ್ಥಿತ್ಯಂತರ ಹಾಗೂ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಮೇಲೆ ಈ ಸಮ್ಮೇಳನ ಉತ್ತಮ ಬೆಳಕು ಚೆಲ್ಲಲಿದೆ. ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಮ್ಮೇಳನದ ಸಿದ್ಧತೆಯಲ್ಲಿ ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖ ಪದಾಧಿಕಾರಿಗಳಾದ ರವೀಂದ್ರಕುಮಾರ ಭಂಟನಳ್ಳಿ, ಕಲ್ಯಾಣಕುಮಾರ ಶೀಲವಂತ, ಸಿದ್ಧಲಿಂಗ ಬಾಳಿ, ಶಿವಾನಂದ ಪೂಜಾರಿ, ರಮೇಶ ಬಡಿಗೇರ, ಧರ್ಮರಾಜ ಜವಳಿ, ಡಾ. ರೆಹಮಾನ್ ಪಟೇಲ, ಜಗದೀಶ ಮರಪಳ್ಳಿ, ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಶಕುಂತಲಾ ಪಾಟೀಲ, ಸೈಯ್ಯದ್ ನಜಿರುದ್ದೀನ್ ಮುತ್ತವಲಿ, ಬಾಬುರಾವ ಪಾಟೀಲ ಸೇರಿದಂತೆ ಅನೇಕರು ತೊಡಗಿಸಿಕೊಂಡಿದ್ದಾರೆ.

ಸಮ್ಮೇಳನಾಧ್ಯಕ್ಷ ಡಾ. ತರನಳ್ಳಿ ಅವರ ಪರಿಚಯ:

ಜಿಲ್ಲೆಯ ಸೇಡಂ ತಾಲೂಕಿನ ಸಣ್ಣ ಹಳ್ಳಿ ತರನಳ್ಳಿ. ಈ ಪುಟ್ಟ ಗ್ರಾಮದ ಕುಟುಂಬವೊAದರಲ್ಲಿ ಶ್ರೀಮತಿ ಭಾಗಮ್ಮ ಶ್ರೀ ಲಕ್ಷö್ಮಣ ಎಂಬ ದಂಪತಿಯ ಉದರದಲ್ಲಿ ೧೯೭೮ ರ ಜೂನ್ ಹದಿನೈದರಂದು ಜನಿಸಿದವರು ಡಾ. ಜಗನ್ನಾಥ ತರನಳ್ಳಿ. ಬಡತನದ ಕುಟುಂಬದಲ್ಲಿ ಬೌದ್ಧಿಕ ಶ್ರೀಮಂತನಾಗಿದ್ದ ತಮ್ಮ ದೊಡ್ಡಪ್ಪ ಕವಿ ಕಾಶಪ್ಪನವರ ನೀತಿ ನುಡಿ ಹಾಡುಗಳನ್ನು ಕೇಳುತ್ತಲೇ ಬೆಳೆದ ತರನಳ್ಳಿಯವರು ಗ್ರಾಮೀಣ ಪ್ರದೇಶಗಳ ಜನಪದ ವಲಯದಲ್ಲಿ ನಾದ ಸಂಗೀತಗಳಿAದ ಗುರುತಿಸಿಕೊಂಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸೇಡಂ ನ ಶಿವಯೋಗಿ ಸಂಸ್ಥೆಯಲ್ಲಿ ಮುಗಿಸಿ, ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ, ನೃಪತುಂಗ ಪದವಿ ಕಾಲೇಜಿನಲ್ಲಿ ಡಿಗ್ರಿಯನ್ನು ಮುಗಿಸಿದ್ದಾರೆ. ತಮ್ಮ ಕುಟುಂಬದಲ್ಲಿಯೇ ಮೊದಲನೆಯ ತಲೆಮಾರಿನ ಅಕ್ಷರಸ್ಥರಾದ ಡಾ. ತರನಳ್ಳಿ ಅವರು ಶಿಕ್ಷಣದ ಮಹತ್ವವನ್ನು ಅರಿತು ಮೂರು ಬ್ಯಾಚುಲರ್ ಡಿಗ್ರಿ, ಮೂರು ಮಾಸ್ಟರ್ ಡಿಗ್ರಿ ಹಾಗೂ ಒಂದು ಡಾಕ್ಟರೇಟ್ ಒಟ್ಟು ಏಳು ಡಿಗ್ರಿಗಳನ್ನು ಪಡೆದು ಈಗ ಡಾ. ಜಗನ್ನಾಥ ತರನಳ್ಳಿ ಯಾಗಿ ಅನೇಕ ಹಿತೈಷಿಗಳ ಗೌರವಕ್ಕೆ ಪಾತ್ರಾಗಿದ್ದಾರೆ. ಅತಿಥಿ ಉಪನ್ಯಾಸಕರಾಗಿ, ಪತ್ರಕರ್ತರಾಗಿ, ಜತೆಗೆ ನ್ಯಾಯವಾದಿಯಾಗಿ ಕ್ರಿಯಾಶೀಲರಾಗಿದ್ದಾರೆ. ಗಾಢವಾದ ಬಡತನದ ಬೇಗೆಯಲ್ಲಿ ಹಸಿದವರ ಕೂಗು, ಉಂಡವರ ತೇಗು ಎರಡನ್ನೂ ಕಂಡು ಬದುಕನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗೆ ಮಾರು ಹೋಗಿ ವಾಸ್ತವದ ನೆಲೆಯಲ್ಲಿ ವೈಚಾರಿಕತೆಯತ್ತ ಮುಖ ಮಾಡಿದ್ದಾರೆ. ಹಳಗನ್ನಡ ದಿಂದ ಆಧುನಿಕ ಕನ್ನಡದ ವರೆಗೆ ಪ್ರಮುಖವಾದ ಕೃತಿ ಕಾವ್ಯಗಳನ್ನು ಓದಿಕೊಂಡ ಇವರು ಡಿವಿಜಿ ಕಗ್ಗ ಗಳನ್ನು ಕರಗತ ಮಾಡಿಕೊಂಡAತೆ ಬೇಂದ್ರೆ ಸಾಹಿತ್ಯದ ಬಗ್ಗೆ ವಿಶೇಷವಾಗಿ ಓದಿಕೊಂಡದ್ದರ ಪರಿಣಾಮವಾಗಿ ಈ ಭಾಗದ ` ಬೇಂದ್ರೆ ಮಾಸ್ತರ್ ‘ ಎಂದೇ ಕರೆಯಿಸಿಕೊಳ್ಳುತ್ತಾರೆ. ಅಧ್ಯಯನದ ಪ್ರಭಾವದಿಂದ ಅಕ್ಷರ ಲೋಕವನ್ನು ಅಪ್ಪಿಕೊಂಡoತೆ ಸಾಹಿತ್ಯ ಕೃಷಿಯಲ್ಲಿ ತೊಡಗಿ ಈ ವರೆಗೆ ರತ್ನಗಿರಿಯ ರತ್ನ, ನೃಪತುಂಗ ನೆಲದ ಉತ್ತುಂಗ, ಬೇಂದ್ರೆ ಬೆಳಕು, ಒಂದು ದಿನದ ಬ್ರಾಹ್ಮಣ, ವಿಜಯ ಕನ್ನಡ ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಶರಣ ಸಾಹಿತ್ಯದಲ್ಲಿ ಎಂ.ಎ. ಕನ್ನಡ ಮಾಡಿರುವ ಡಾ. ತರನಳ್ಳಿ ಯವರು ವಚನ ಸಾಹಿತ್ಯ ವನ್ನು ಕೂಡ ಸೂಕ್ಷ್ಮವಾಗಿ ಅಧ್ಯಯನ ಮಾಡಿ ತಮ್ಮ ವಿಶೇಷ ಉಪನ್ಯಾಸಗಳ ಮೂಲಕ ಪ್ರೇರಣಾದಾಯಕ ವ್ಯಕ್ತಿತ್ವವನ್ನು ರೂಪಿಸಿಕೊಂಡು ಇತರರಿಗೆ ಅನುಕರಣೀಯರಾಗಿದ್ದಾರೆ. ಸಧ್ಯ ಜಿಲ್ಲಾ ಮಟ್ಟದ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಯಾಗುವ ಮೂಲಕ ಗ್ರಾಮೀಣ ಭಾಗದ ಪ್ರತಿಭಾವಂತ ಲೇಖಕರೊಬ್ಬರನ್ನು ಗುರುತಿಸಿ ಪ್ರೋತ್ಸಾಹಿಸಿದಂತಾಗಿದೆ.

Share post:

spot_imgspot_img

Popular

More like this
Related

ಕಲಬುರಗಿ| ಪ್ರೀಯಕರನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಪ್ರಕರಣ; ಮೃತದೇಹ ಪತ್ತೆ 

ಕಲಬುರಗಿ: ಪ್ರೀಯಕರನ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ...

ಕಲಬುರಗಿ: ಜುಲೈ 23 ರಿಂದ 27 ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ: ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಜಲಮೂಲ ನದಿಗಳಲ್ಲಿ ಒಂದಾದ...

ಕಲಬುರಗಿ| ಜು.25 ರಿಂದ ಗುಡ್ಡಾಪೂರ ದಾನಮ್ಮ ದೇವಿ ಪುರಾಣ ಪ್ರಾರಂಭ: ಸಿರಗಾಪೂರ

ಕಲಬುರಗಿ: ಪ್ರತಿ ವರ್ಷದಂತೆ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಜಯನಗರ ಶಿವಮಂದಿರದಲ್ಲಿ...

ಕಲಬುರಗಿ| ಕಲ್ಯಾಣ ಕರ್ನಾಟಕ ಸುಸ್ಥಿರ ಅಭಿವೃದ್ಧಿಗೆ ಡಿ.15ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ: ಬಿ.ಆರ್.ಪಾಟೀಲ್

ಕಲಬುರಗಿ: ರಾಜ್ಯದಲ್ಲಿ ಮಾನವ ಅಭಿವೃದ್ಧಿ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ದಿ ಯೋಜನೆ...