ಕಲಬುರಗಿ: ಯುವಕನ ಕಿರುಕುಳಕ್ಕೆ ಬೇಸತ್ತು ಬೆಣ್ಣೇತೋರಾ ಡ್ಯಾಂ ಹಿನ್ನಿರಿಗೆ ಜಿಗಿದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಮಲಾಪುರ ತಾಲೂಕಿನ ಕುರಿಕೋಟ ಗ್ರಾಮದ ಬಳಿಯಿರೋ ಸೇತುವೆ ಸಮೀಪ ನಡೆದಿದೆ.
ಕಮಲಾಪುರ ತಾಲೂಕಿನ ಭೂಸಣಗಿ ಗ್ರಾಮದ ಯುವತಿ ಸಾಕ್ಷಿ ಉಪ್ಪಾರ್ (22) ಬೆಣ್ಣೆತೋರಾ ಹಿನ್ನಿರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದುಬಂದಿದೆ.
ಅಭಿಷೇಕ್ ಮಾಳಗೆ ಎಂಬ ಯುವಕನಿಂದ ನಿರಂತರ ಕಿರುಕುಳ ಕೊಟ್ಟಿರುವ ಆರೋಪಿಸಲಾಗಿದೆ. ಅಭಿಷೇಕ್ ನು ತಾವಿಬ್ಬರೂ ಜೊತೆಗಿರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ಎನ್ನಲಾಗಿದೆ. ಇದಕ್ಕೆ ಮನನೊಂದು ಯುವತಿ ಸಾಕ್ಷಿ ನದಿಗೆ ಹಾರಿದ್ದಾಳೆ ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳದಿಂದ ಮೃತದೇಹ ಹುಡುಕಾಟ ನಡೆಯುತ್ತಿದೆ. ಈ ಘಟನೆ ಮಹಾಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.