ಕಲಬುರಗಿ: ಹೃದಯಾಘಾತದಿಂದ ನವವಿವಾಹಿತರೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಚಿಂಚೋಳಿ ತಾಲ್ಲೂಕಿನ ಚಂದನಕೇರಾ ಗ್ರಾಮದಲ್ಲಿ ನಡೆದಿದೆ.
ಮೊಹಸೀನ್ ಒಶಾ ಪಟೇಲ್ (22) ಮೃತ ನವವಿವಾಹಿತ ಎಂದು ತಿಳಿದುಬಂದಿದೆ. ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮೊಹಸೀನ್ ಒಶಾ ಪಟೇಲ್, ಮೋಹರಂ ಹಬ್ಬದ ಸಲುವಾಗಿ ಚಂದನಕೇರಾ ಗ್ರಾಮಕ್ಕೆ ಈಚೆಗೆ ತೆರಳಿದ್ದರು. ಹಬ್ಬದ ಸಂಭ್ರಮದಲ್ಲೇ ಇದ್ದ ಮೊಹಸೀನ್ ಮದುವೆಯಾಗಿ ಮೂರು ವಾರಗಳಷ್ಟೇ ಮುಗಿದಿದ್ದವು.
ಘಟನೆ ರಟಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.