ಕಲಬುರಗಿ| ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ‘ಭಾರತ ರತ್ನ’ ಘೋಷಿಸುವಂತೆ ಎಂಎಲ್ಸಿ ಕಮಕನೂರ್ ಒತ್ತಾಯ 

Date:

Share post:

ಕಲಬುರಗಿ: ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಶನಿವಾರ ನಗರದಲ್ಲಿ ನಡೆಯುತ್ತಿರುವ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದ್ಧ ಬಸವ ಅಂಬೇಡ್ಕರ್ ಅವರ ಇತಿಹಾಸವನ್ನು ನಾವು ಓದುತ್ತಿದ್ದೇವೆ, ಅದರಂತೆಯೇ ಈಗ ನಾವು ಕಲಬುರಗಿಯ ಇತಿಹಾಸ ನಿರ್ಮಾಣ ಮಾಡಿದ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ ಬಗ್ಗೆಯೂ ಓದಬೇಕಿದೆ. ಅಂತಹ ಶ್ರೇಷ್ಠ ನಾಯಕರಿಗೆ ದೇಶದ ಮಹೋನ್ನತ ಪ್ರಶಸ್ತಿ ಆಗಿರುವ ‘ಭಾರತ ರತ್ನ’ ನೀಡಬೇಕು, ಇದಕ್ಕೆ ಅವರು ಅರ್ಹ ವ್ಯಕ್ತಿಯಾಗಿದ್ದಾರೆ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ, ಅವಿರತ ಶ್ರಮಿಸುತ್ತಿರುವ ಮಲ್ಲಿಕಾರ್ಜುನ್ ಖರ್ಗೆ ಅವರು ಮುಂದಿನ ದಿನಗಳಲ್ಲಿ ಪ್ರಧಾನ ಮಂತ್ರಿ, ದೇಶದ ರಾಷ್ಟ್ರಪತಿ ಆಗಬೇಕು, ಇದು ನಮ್ಮೆಲ್ಲರ ಬಯಕೆ ಇದೆ. ಆದಷ್ಟು ಬೇಗ ಈಡೇರಲಿ ಎಂದು ವೇದಿಕೆಯಲ್ಲಿ ಪ್ರಾರ್ಥಿಸಿದ್ದಾರೆ.

ವೇದಿಕೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಚಿವ ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರ ಶಾಸಕರು ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಡಾ.ಫ.ಗು. ಹಳಕಟ್ಟಿ ಅವರಿಂದ ವಚನ ಸಾಹಿತ್ಯ ಮರು ಹುಟ್ಟು: ಡಾ. ಹೂವಿನಭಾವಿ

ಕಲಬುರಗಿ: ವಚನ ಸಂಶೋಧನಾ ಪಿತಾಮಹ ಡಾ. ಫ ಗು ಹಳಕಟ್ಟಿ ಅವರ...

ಕಲಬುರಗಿ| ಜುಲೈ 7 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ...

ಕಲಬುರಗಿ| ಜುಲೈ 8 ರಂದು ಮಿನಿ ಉದ್ಯೋಗ ಮೇಳ

ಕಲಬುರಗಿ: ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಜುಲೈ...

ಕಲಬುರಗಿ| ವನಮಹೋತ್ಸವಕ್ಕೆ ಚಾಲನೆ; ಹಸಿರಿದ್ದರೆ ಉಸಿರು, ಗಿಡ ನೆಟ್ಟು ಪರಿಸರ ಕಾಪಾಡಿ: ಡಾ.ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಭೂಮಿ ಮೇಲೆ ಜೀವನ ನಡೆಸಲು ನಿಸರ್ಗವೇ ಜೀವನಕ್ಕೆ ಆಧಾರವಾಗಿದೆ. ಹಸಿರಿದ್ದರೆ...