ಕಲಬುರಗಿ| ಭ್ರಷ್ಟಾಚಾರ ಮುಕ್ತ ಆಳಂದ ಆಂದೋಲನಕ್ಕೆ ಜೆಡಿಎಸ್ ಚಾಲನೆ 

Date:

Share post:

ಕಲಬುರಗಿ: ಆಳಂದ ತಾಲ್ಲೂಕಿನ ಜನತೆ ದೀರ್ಘಕಾಲದಿಂದ ಭ್ರಷ್ಟಾಚಾರದ ದಂಗುಬಡಿಕೆಯಿoದ ಬೆಸತ್ತಿದ್ದಾರೆ. ಜನಪ್ರತಿನಿಧಿಗಳು ಜನರಿಗೆ ಒಡ್ಡುತ್ತಿರುವ ದೌರ್ಜನ್ಯ, ಅನ್ಯಾಯ ಮತ್ತು ಅವ್ಯವಸ್ಥೆಗೆ ಕೊನೆ ಹಾಡಬೇಕಿದೆ. ಈ ಕಾರಣಕ್ಕಾಗಿ ಜೆಡಿಎಸ್ ನಾಯಕಿ ಮಹೇಶ್ವರಿ ಎಸ್. ವಾಲಿ ನೇತೃತ್ವದಲ್ಲಿ ಆರಂಭಿಸಿದ “ಭ್ರಷ್ಟಾಚಾರ ಮುಕ್ತ ಆಳಂದ ಆಂದೋಲನ”ವು ಕ್ಷೇತ್ರದಲ್ಲಿ ಜನರ ಆಕಾಂಕ್ಷೆಗಳಿಗೆ ಧ್ವನಿಯಾಗಲಿದೆ,” ಎಂದು ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ ಕುಮಾರಸ್ವಾಮಿ ಹೇಳಿದರು.

ಕೈಗೊಳ್ಳುವ ಭ್ರಷ್ಟಾಚಾರ ಮುಕ್ತ ಆಳಂದ ಆಂದೋಲನ ಮತ್ತು ಪಕ್ಷದ ಸದಸ್ಯತ್ವಕ್ಕೆ ಶುಕ್ರವಾರ ಕಲಬುರಗಿಯಲ್ಲಿ ನಡೆದ ಪಕ್ಷದ ಸಮಾರಂಭದಲ್ಲಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿ ನಿಖಿಲ ಮಾತನಾಡಿದರು.

ಈ ಆಂದೋಲನ ಮೂಲಕ ಜೆಡಿಎಸ್‌ನ ನಾಯಕಿ ಮಹೇಶ್ವರಿ ಎಸ್. ವಾಲಿ ಅವರು ಆಳಂದದ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಆಂದೋಲನದ ನೇತೃತ್ವ ವಹಿಸಿದ್ದಾರೆ. ಈ ಆಂದೋಲನವು ಜನರಿಗೆ ನ್ಯಾಯ ಒದಗಿಸುವ ಜೊತೆಗೆ ರಾಜಕೀಯ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

“ನಾವು ಜನರ ಶಕ್ತಿಯನ್ನು ಒಗ್ಗೂಡಿಸಿ, ಭ್ರಷ್ಟಾಚಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವೆವು. ವಾಲಿ ಅವರ ದಿಟ್ಟ ನಾಯಕತ್ವದಲ್ಲಿ, ಈ ಆಂದೋಲನವು ಆಳಂದದ ಜನತೆಗೆ ಆಶಾಕಿರಣವಾಗಲಿದೆ,” ಈ ಆಂದೋಲನವು ಒಬ್ಬರಿಂದ ಆರಂಭವಾಗಿಲ್ಲ, ಇದು ಆಳಂದದ ಜನರ ಆಕಾಂಕ್ಷೆಯ ಧ್ವನಿಯಾಗಿದೆ. ಒಗ್ಗಟ್ಟಿನಿಂದ ನಾವು ಭ್ರಷ್ಟಾಚಾರವನ್ನು ಕಿತ್ತೊಗೆಯಬಹುದು. ಮಹೇಶ್ವರಿ ವಾಲಿ ಅವರ ನಾಯಕತ್ವಕ್ಕೆ ಬೆಂಬಲ ನೀಡಿ, ಆಳಂದವನ್ನು ಭ್ರಷ್ಟಾಚಾರ ಮುಕ್ತಗೊಳಿಸಿ,” ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಹೇಶ್ವರಿ ಎಸ್. ವಾಲಿ ಅವರು ಮಾತನಾಡಿ, ಆಳಂದದ ಜನತೆಗೆ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದರು. ಆಳಂದದ ಜನತೆ ದಶಕಗಳಿಂದ ಭ್ರಷ್ಟಾಚಾರದ ಕತ್ತಲಿನಿಂದ ಕಾಡಲ್ಪಟ್ಟಿದ್ದಾರೆ. ಇಂದು ನಾವು ಈ ಆಂದೋಲನದ ಮೂಲಕ ಜನರಿಗೆ ನ್ಯಾಯ ಕೊಡಲು, ಪಾರದರ್ಶಕ ಆಡಳಿತವನ್ನು ಸ್ಥಾಪಿಸಲು ಒಂದು ಹೊಸ ಆರಂಭ ಮಾಡಿದ್ದೇವೆ. ಜನರೊಂದಿಗೆ ಕೈಜೋಡಿಸಿ, ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ನಾವು ಹೋರಾಡುವೆವು,” ಎಂದು ಅವರು ಘೋಷಿಸಿದರು. “ನಾವು ಯಾವುದೇ ರಾಜಕೀಯ ಒತ್ತಡಕ್ಕೆ ಬಗ್ಗದೆ, ಜನರಿಗಾಗಿ ಕೆಲಸ ಮಾಡುವೆವು. ಈ ಆಂದೋಲನವು ಜನರ ಧ್ವನಿಯಾಗಿದೆ, ಜನರ ಹಕ್ಕುಗಳಿಗಾಗಿ ನಾವು ಒಗ್ಗಟ್ಟಿನಿಂದ ನಿಲ್ಲುವೆವು,” ಎಂದು ಅವರು ಜನತೆಗೆ ಕರೆ ನೀಡಿದರು.

ಭ್ರಷ್ಟಾಚಾರ ಮುಕ್ತ ಆಳಂದ ಆಂದೋಲನವು, ಸ್ಥಳೀಯ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವುದು, ಜನಪ್ರತಿನಿಧಿಗಳಿಂದ ಜನರಿಗೆ ನ್ಯಾಯ ಒದಗಿಸುವುದು ಮತ್ತು ಆಳಂದ ತಾಲೂಕಿನಲ್ಲಿ ಸಮರ್ಥ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ವಾಲಿ ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರು, ವೆಂಕಟೇಶ ರಾಠೋಡ ಸೇರಿ ಹಲವಾರು ಮುಖಂಡರು, ಕಾರ್ಯಕರ್ತರು, ಸ್ಥಳೀಯ ಆಳಂದದ ಕಾರ್ಯಕರ್ತರು ಭಾಗವಹಿಸಿದ್ದರು.

 

Share post:

spot_imgspot_img

Popular

More like this
Related

ಕಲಬುರಗಿ| ಸಾರಾಯಿ ಕುಡಿಯಲು ಹಣ ಕೊಡದಿದ್ದಕ್ಕೆ ಪತ್ನಿ ಕೊಲೆ; ಪತಿಗೆ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ

ಕಲಬುರಗಿ: ಸಾರಾಯಿ ಕುಡಿಯಲು ಹಣ ಕೋಡದಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿ,...

ಕಲಬುರಗಿ| ಹಲಕಟ್ಟಾ ಶರೀಫ್‍ನಲ್ಲಿ ಉರುಸ್-2025 ಪ್ರಯುಕ್ತ ವಿಶೇಷ ರೈಲು ಸಂಚಾರ 

ಕಲಬುರಗಿ: ಹಲಕಟ್ಟಾ ಶರೀಫನಲ್ಲಿ (ಉರ್ಸ್-ಎ-ಶರೀಫ್) ಉರುಸ್ 2025ರ ಪ್ರಯುಕ್ತ ಕೆಳಕಂಡ ದಿನಾಂಕಗಳಂದು...

ಕಲಬುರಗಿ| ರೈತರ ಒಗ್ಗಟ್ಟಿನಿಂದ ಹಕ್ಕು ಮತ್ತು ನ್ಯಾಯಕ್ಕಾಗಿ ಹೋರಾಟ: ಭೀಮಾಶಂಕರ ಮಾಡಿಯಾಳ

ಕಲಬುರಗಿ: ರೈತರ ಹಿತಾಸಕ್ತಿಗಳನ್ನು ಕಾಪಾಡಲು ಒಗ್ಗಟ್ಟಿನ ಬಲವನ್ನು ತಂದುಕೊಳ್ಳುವುದು ಇಂದಿನ ಅಗತ್ಯವಾಗಿದೆ....

ಕಲಬುರಗಿ| ಜುಲೈ ಮಾಸಾಂತ್ಯಕ್ಕೆ ಜಿಲ್ಲಾ ಕಸಾಪದಿಂದ ಯುವ ಸಾಹಿತ್ಯ ಸಮ್ಮೇಳನ: ವಿಜಯಕುಮಾರ ಪಾಟೀಲ ತೇಗಲತಿಪ್ಪಿ

ಕಲಬುರಗಿ : ಯುವ ಬರಹಗಾರರಿಗೆ ಸ್ಫೂರ್ತಿ ನೀಡಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ...