ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಹೈಪರ್ ಟೆನ್ಷನ್ ದಿನಾಚರಣೆ ಅಂಗವಾಗಿ ವಿಶೇಷ ಜಾಗೃತಿ ಶಿಬಿರ ಮತ್ತು ಉಚಿತ ರಕ್ತದೊತ್ತಡ ತಪೋಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿಯಿತು.
ಈ ಸಂದರ್ಭದಲ್ಲಿ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ.ಸುರೇಶ್ ಹರಸೂರ ಮಾತನಾಡಿ, ಹೈ ಬಿಪಿ ಯಿಂದಾಗಿ ಅನೇಕ ತೊಂದರೆಗಳು ಜೀವಕ್ಕೆ ಅಪಾಯಗಳು ಸಂಭವಿಸಬಹುದು, ಆದ್ದರಿಂದ ಈ ಜಾಗೃತಿ ಶಿಬಿರದ ಮೂಲಕ ಹೈಪರ್ ಟೆನ್ಷನ್ ( ಹೈ ಬಿಪಿ) ಅನ್ನು ಬೇಗನೆ ಪತ್ತೆ ಹಚ್ಚಿ ಅದರಿಂದ ಆಗುವ ಸಂಭಾವ್ಯ ಅಪಾಯಗಳನ್ನು ತಪ್ಪಿಸುವುದು ಎಂದರು.
ಇಂದಿನ ದಿನಗಳಲ್ಲಿ ಹೈಪರ್ ಟೆನ್ಷನ್ ಕುರಿತಾದ ನಿರ್ವಹಣೆಯ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದು ಅಗತ್ಯವಿದೆ ಎಂದರು.
ಈ ಶಿಬಿರದಲ್ಲಿ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಬಿಪಿ, ಶುಗರ್ ತಪಾಸಣೆ ಮಾಡಿಕೊಂಡು ತಜ್ಞ ವೈದ್ಯರಿಂದ ನಿಯಮಿತ ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ಹೇಗೆ ನಿಯಂತ್ರಣ ಮಾಡಿಕೊಂಡು ಜೀವನಶೈಲಿ ನಡೆಸಬೇಕೆಂದು ಸಲಹೆ ಪಡೆದುಕೊಂಡರು.
ಈ ಶಿಬಿರದ ಮೇಲುಸ್ತುವಾರಿಯನ್ನು ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಸುರೇಶ್ ಹರಸೂರ, ಸಹ ಪ್ರಾಧ್ಯಾಪಕ ಡಾ.ಸಿ ಬಿ ನಂದ್ಯಾಳ ವಹಿಸಿದ್ದರು.
ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ವೈದ್ಯರ ತಂಡಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ, ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ ಕೈಲಾಸ ಪಾಟೀಲ್ ಹಾಗೂ ಆಸ್ಪತ್ರೆಯ ಸಂಚಾಲಕರಾದ ಡಾ.ಕಿರಣ್ ದೇಶಮುಖ್ ಹಾಗೂ ಆಡಳಿತ ಮಂಡಳಿ ಸದಸ್ಯರು, ವೈದ್ಯಕೀಯ ಅಧಿಕ್ಷಕರಾದ ಡಾ.ಆನಂದ ಗಾರಂಪಳ್ಳಿ ಅಭಿನಂದಿಸಿದರು.