ಕಲಬುರಗಿ| ಫ.ಗು. ಹಳಕಟ್ಟಿಯವರ 146ನೇ ಜನ್ಮ ದಿನಾಚರಣೆ

Date:

Share post:

ಕಲಬುರಗಿ: ವಚನಗಳನ್ನು ಸಂರಕ್ಷಣೆ ಮಾಡಿ ನಮಗೆ ಶರಣ ಸಾಹಿತ್ಯವನ್ನು ಓದಲು ಮಹತ್ವದ ಕಾರ್ಯ ಮಾಡಿದ ಡಾ.ಫ.ಗು. ಹಳ್ಳಕಟ್ಟಿ ಅವರು ಸೇವೆ ಅವಿಸ್ಮರಣೀಯ ಎಂದು ಕಲಬುರಗಿ ಚೇಂಬರ್ ಆಫ್ ಕಾರ್ಮಸ್‍ನ ಅಧ್ಯಕ್ಷ ಶರಣು ಪಪ್ಪಾ ಹೇಳಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಸುವರ್ಣ ಸಭಾ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳು ಸಂಯುಕ್ತಾಶ್ರಯದಲ್ಲಿ ಡಾ.ಫ.ಗು. ಹಳಕಟ್ಟಿಯವರ 146ನೇ ಜನ್ಮದಿನ ನಿಮಿತ್ತ “ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ” ಯ ಕಾರ್ಯಕ್ರಮದಲ್ಲಿ ಫ.ಗು ಹಲಕಟ್ಟಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮಾತನಾಡಿದರು.

ಕಲ್ಯಾಣದ ಕ್ರಾಂತಿಯಿಂದ ಚದುರಿ ಹೋದ ಶರಣರ ವಚನಗಳನ್ನು ಸಂರಕ್ಷಣೆ ಮಾಡಿ ಇಂದು ನಮಗೆ ನೀಡಿದ್ದಾರೆ. ಶರಣರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಮಾದನ ಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಸವ ಪಾಟೀಲ ಜವಳಿ ಮಾತನಾಡಿ, ಕತ್ತಲೆಯಲ್ಲಿ ಕಳೆದು ಹೋಗಿದ್ದ ವಚನಗಳನ್ನು ಸಂರಕ್ಷಣೆ ಮಾಡಿ ಮುಂದಿನ ತಲೆಮಾರುಗಳಿಗೆ ಮಾರ್ಗದರ್ಶಿಯಾಗಬೇಕೆಂಬ ಕಾರಣಕ್ಕೆ ತಮ್ಮ ಇಡೀ ಬದುಕು ಸವೆಸಿದ ಫ.ಗು. ಹಳಕಟ್ಟಿಯವರು ಈ ನೆಲದ ಬೆಳಕ್ಕಾಗಿ ಈ ನೆಲದ ದಾರ್ಶನಿಕರಾಗಿ ಗಮನ ಸೆಳೆಯುತ್ತಾರೆ ಎಂದರು.

ಇಂಗ್ಲೀಷ ಮತ್ತು ಕನ್ನಡ ಎರಡು ಭಾಷಗೆ ಅನುವಾದ ಮಾಡಿದ್ದು, ದೂರದೃಷ್ಟಿ ಇರುವ ಕಾರಣಕ್ಕೆ ವಿಜಯಪುರಕ್ಕೆ ಆಗಿನ ಕಾಲದಲ್ಲಿ ಕೆರೆಕಟ್ಟಿಸಿದ್ದು, ಸಹಕಾರಿ ಬ್ಯಾಂಕ್ ಸ್ಥಾಪಿಸಿದ್ದು, ಬಿ.ಎಲ್.ಡಿ.ಈ ಸಂಸ್ಥೆ ಆರಂಭಿಸಿದ್ದು ಅವರ ಜನಪರ ಕಾಳಜಿ ಎತ್ತಿ ಹಿಡಿಯುತ್ತದೆ ಎಂದು ತಿಳಿಸಿದರು.

ಬಸವಣ್ಣನವರ ಕಾಲದಲ್ಲಿ ಅನೇಕ ವಚನಗಳನ್ನು ಸಾಹಿತ್ಯಗಳನ್ನು ರಚಿಸಿ ತಮ್ಮ ಜೀವನದಲ್ಲಿ ಅನೇಕ ಸಾಧನೆ ಮಾಡಿದರು ಎಂದರು. ಅವರ ಆದರ್ಶ ಮತ್ತು ತತ್ವಗಳನ್ನು ನಮ್ಮ ಇಂದಿನ ಯುವಕರು ಆಳವಡಿಸಿಕೊಳ್ಳಬೇಕೆಂದು ಅವರು ಹೇಳಿದರು.

ರಾಷ್ಟ್ರಪತಿ ಪದಕ ಪುರಸ್ಕೃತರಾದ ಹಾಗೂ ನಿವೃತ್ತ ಡಿ.ವೈ.ಎಸ್.ಪಿ. ಸಮಿತಿ ಅಧ್ಯಕ್ಷರಾದ ಆರ್.ಸಿ.ಫಾಳೆ ಅವರು ಮಾತನಾಡಿ, ಡಾ. ಫ.ಗು. ಹಳ್ಳಿಯವರು ಧಾರವಾಡದಲ್ಲಿ ಬಿ.ಎ.ಪದವಿ ಮತ್ತು ಮಹಾರಾಷ್ಟ್ರದ ಮುಂಬಯಿ ಹೋಗಿ ಎಲ್.ಎಲ್.ಬಿ.ಪದವಿ ಪಡೆದರು ಬಸವಣ್ಣನವರ ಕಾಲದಲ್ಲಿ ಅನೇಕ ವಚನಗಳನ್ನು ರಚಿಸಿದರು.

ವೀರಶೈವ ಮಹಾಸಭಾದ ಕಾರ್ಯಾಧ್ಯಕ್ಷರು ರವಿಂದ್ರ ಶಾಹಬಾದಿ, ಜಿಲ್ಲಾಧಿಕಾರಿಗಳ ಕಚೇರಿ ಸಾಮಾಜಿಕ ಭದ್ರತಾ ಮತ್ತು ಪಿಂಚಣಿ ಸಹಾಯಕ ನಿರ್ದೇಶಕ ಶಿವಶರಣಪ್ಪ ದನ್ನಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು.

ಜಗತ್ ವೃತ್ತದಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ ಮಾರ್ಗವಾಗಿ ಕನ್ನಡದ ಭವನ ಸಾಂಸ್ಕೃತಿಕ ಮೆರವಣಿಗೆಯನ್ನು ಸಾಮಾಜಿಕ ಚಿಂತಕರಾದ ಜಾಹ್ನವಿ, ಶರಣಕುಮಾರ ಮೋದಿ ಚಾಲನೆ ನೀಡಿದರು.

ವೇದಿಕೆ ಮೇಲೆ ಜಿಲ್ಲಾಧಿಕಾರಿಗಳ ಶಿಷ್ಟಾಚಾರದ ತಹಶೀಲ್ದಾರ ಪಂಪಯ್ಯ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವರಾಜ ಅಂಗಡಿ, ಸಮಾಜದ ಮುಖಂಡರಾದ ಅಪ್ಪಾರಾವ ಅಕ್ಕೋಣೆ, ಶಿವಪುತ್ತಪ್ಪ ಭಾವಿ, ವಿನೋದಕುಮಾರ, ಜೇನವೇರಿ , ಶಿವಲಿಂಗಪ್ಪ ಅಷ್ಟಗಿ, ಡಾ ಬಸವರಾ ಚೆನ್ನಾ ಸೇರಿದಂತೆ ಹಲವರು ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಸಾರಾಯಿ ಕುಡಿಯಲು ಹಣ ಕೊಡದಿದ್ದಕ್ಕೆ ಪತ್ನಿ ಕೊಲೆ; ಪತಿಗೆ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ

ಕಲಬುರಗಿ: ಸಾರಾಯಿ ಕುಡಿಯಲು ಹಣ ಕೋಡದಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿ,...

ಕಲಬುರಗಿ| ಹಲಕಟ್ಟಾ ಶರೀಫ್‍ನಲ್ಲಿ ಉರುಸ್-2025 ಪ್ರಯುಕ್ತ ವಿಶೇಷ ರೈಲು ಸಂಚಾರ 

ಕಲಬುರಗಿ: ಹಲಕಟ್ಟಾ ಶರೀಫನಲ್ಲಿ (ಉರ್ಸ್-ಎ-ಶರೀಫ್) ಉರುಸ್ 2025ರ ಪ್ರಯುಕ್ತ ಕೆಳಕಂಡ ದಿನಾಂಕಗಳಂದು...

ಕಲಬುರಗಿ| ರೈತರ ಒಗ್ಗಟ್ಟಿನಿಂದ ಹಕ್ಕು ಮತ್ತು ನ್ಯಾಯಕ್ಕಾಗಿ ಹೋರಾಟ: ಭೀಮಾಶಂಕರ ಮಾಡಿಯಾಳ

ಕಲಬುರಗಿ: ರೈತರ ಹಿತಾಸಕ್ತಿಗಳನ್ನು ಕಾಪಾಡಲು ಒಗ್ಗಟ್ಟಿನ ಬಲವನ್ನು ತಂದುಕೊಳ್ಳುವುದು ಇಂದಿನ ಅಗತ್ಯವಾಗಿದೆ....

ಕಲಬುರಗಿ| ಜುಲೈ ಮಾಸಾಂತ್ಯಕ್ಕೆ ಜಿಲ್ಲಾ ಕಸಾಪದಿಂದ ಯುವ ಸಾಹಿತ್ಯ ಸಮ್ಮೇಳನ: ವಿಜಯಕುಮಾರ ಪಾಟೀಲ ತೇಗಲತಿಪ್ಪಿ

ಕಲಬುರಗಿ : ಯುವ ಬರಹಗಾರರಿಗೆ ಸ್ಫೂರ್ತಿ ನೀಡಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ...