ಕಲಬುರಗಿ| ಪೊಲೀಸ್, ಪತ್ರಕರ್ತರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ: ಮೇಘಣ್ಣನವರ್

Date:

Share post:

ಕಲಬುರಗಿ: ಪೊಲೀಸರ ಹಾಗೂ ಪತ್ರಕರ್ತರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್ ಹೇಳಿದರು.

ಅವರು ಅವರು ಶಹಾಬಾದ ನಗರದ ಲಕ್ಷ್ಮಿ ಗಂಜನ ಸೇಂಟ್ ಥಾಮಸ್ ಶಾಲೆಯಲ್ಲಿ ಪೊಲೀಸ್ ಇಲಾಖೆ, ಶಹಾಬಾದ್ ತಾಲೂಕ ಪತ್ರಕರ್ತರ ವತಿಯಿಂದ ಆಯೋಜಿಸಿದ್ದ “ಸಮಾಜದ ಸುಧಾರಣೆಯಲ್ಲಿ ಪೊಲೀಸರ ಹಾಗೂ ಪತ್ರಕರ್ತರ ಪಾತ್ರ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಾಗಿ ಮಾತನಾಡುತ್ತ, ಸಮಾಜದಲ್ಲಿ ಶಾಂತಿ, ಸೌಹಾರ್ದತೆಯಿಂದ ಬಾಳುವದು ಅವಶ್ಯಕವಾಗಿದ್ದು, ಶಾಂತಿ, ಸೌಹಾರ್ದತೆಗೆ ಶಹಾಬಾದ್ ಮಾದರಿಯಾಗಿದೆ ಎಂದರು.

ಡಿವೈಎಸ್‌ಪಿ ಶಂಕರಗೌಡ ಪಾಟೀಲ ಮಾತನಾಡಿ, ಯಾವುದೇ ವಿಷಯ ಕುರಿತು ಪೊಲೀಸರಿಗೆ ಹಾಗೂ ಪತ್ರಕರ್ತರಿಗೆ ವಿಷಯ ವಸ್ತುನಿಷ್ಠತೆ, ಅದರ ಪಾದರ್ಶಕತೆ ಅತ್ಯವಶ್ಯಕವಾಗಿದೆ, ಇತ್ತೀಚಿನ ದಿನಗಳಲ್ಲಿ ಅತಿ ಅಸೆಯಿಂದ ಮೋಸ ಹೋಗುತ್ತಿರುವದರಿಂದ ಸೈಬರ್ ಕ್ರೈಂಗಳು ನಿತ್ಯ ಕಂಡು ಬರುತ್ತಿವೆ. ಇಂತಹ ಸಂದರ್ಭದಲ್ಲಿ ಪೊಲೀಸರೊಂದಿಗೆ ಪತ್ರಕರ್ತರ ವಸ್ತುನಿಷ್ಠ ವರದಿ ಮಾಡಿ, ಜನರಲ್ಲಿ ಜಾಗೃತಿ ಮೂಡಿಸುತ್ತಿವೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ನಂಬಿಕೆಗೆ ಅರ್ಹವಲ್ಲದೆ, ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿರುವದರಿಂದ ಇಂದು ಸಹ ಪತ್ರಿಕೆಗಳು ವಿಶ್ವಾಸರ್ಹವಾಗಿವೆ. ಎಷ್ಟೋ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯ ತನಿಖೆಗೆ ಪತ್ರಕರ್ತರ ವರದಿಗಳು ಸಹಕಾರಿಯಾಗಿವೆ, ಪೊಲೀಸ್ ಇಲಾಖೆಗೆ ತಮ್ಮದೆಯಾದ ಭದ್ರತೆಯಿದೆ. ಆದರೆ, ಪತ್ರಕರ್ತರಿಗೆ ಯಾವುದೇ ಭದ್ರತೆ ಇಲ್ಲ, ಇದೊಂದು ಬಿಟ್ಟರೆ ಪೊಲೀಸರ, ಪತ್ರಕರ್ತರ ಕಾರ್ಯ ವೈಖರಿಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಹೇಳಿದರು.

ಕರೋನಾ ಸಂದರ್ಭದಲ್ಲಿ ಪೊಲೀಸರು, ಪತ್ರಕರ್ತರು ತಮ್ಮ ಜೀವವನ್ನು ಪಣಕ್ಕೆ ಇಟ್ಟು ಕರ್ತವ್ಯ ನಿರ್ವಹಿಸಿರುವುದು ಈ ಶತಮಾನದ ದೊಡ್ಡ ಸಾಧನೆಯಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ದೇವೆಂದ್ರಪ್ಪ ಕಪನೂರ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ,ಸಾನಿಧ್ಯ ವಹಿಸಿದ್ದ, ಸೇಂಟ್ ಥಾಮಸ್ ಚರ್ಚನ ಧರ್ಮಗುರು ಫಾದರ್ ಜೇರಾಲ್ಟ್ ಸಾಗರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವಾಸುದೇವ ಚವ್ಹಾಣ ಮಾತನಾಡಿದರು.

ವೇದಿಕೆ ಮೇಲೆ ನಗರ ಪೊಲೀಸ್ ಠಾಣೆ ಪಿಐ ನಟರಾಜ ಲಾಡೆ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ವಿರೇಂದ್ರ ಕೊಲ್ಲೂರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಡಾ. ಎಂ.ಎ.ರಶೀದ, ದಸಂಸ ರಾಜ್ಯ ಸಂ.ಸ ಚಾಲಕ ಮರೆಪ್ಪ ಹಳ್ಳಿ, ಕೃಷ್ಣಾರೆಡ್ಡಿ ಹಿರೆಡ್ಡಿ ಕೊಲ್ಲೂರ, ಅಣವೀರ ಇಂಗಿನಶೆಟ್ಟಿ, ಶರಣಬಸಪ್ಪ ಕೋಬಾಳ, ಶಿವುಕುಮಾರ ಇಂಗಿನಶೆಟ್ಟಿ, ಸಾಬೇರಾ ಬೇಗಂ, ಗುಂಡಮ್ಮಾ ಮಡಿವಾಳ, ಮ.ಉಬೇದುಲ್ಲಾ, ಸಿದ್ದಲಿಂಗ ಬಾಳಿ, ರಾಘವೇಂದ್ರ ಎಂ.ಜಿ. ಜಗನ್ನಾಥ ಎಚ್.ಎಚ್. ಭೀಮರಾವ ಮೇಟಿ, ಬಾಬುರಾವ ಪಂಚಾಳ, ಅರುಣಕುಮಾರ ಪಟ್ಟಣಕರ್, ಜಹೀರ್ ಅಹ್ಮದ ಪಟವೇಗಾರ, ನಾಗರಾಜ ದಂಡಾವತಿ, ಖಾಜಾ ಪಟೇಲ, ಮ.ಮುಸ್ತಾಕ, ದಾಮೋಧರ ಭಟ್ಟಿ, ಶ್ರೀಪಾದ ಭಟ್ಟ, ಅಬ್ದುಲ ಗನಿ ಸಾಬಿರ ಬಾರಿ, ಪೀರಪಾಶಾ, ದಿಲೀಪ ನಾಯಕ, ಶಂಕರ ಅಳ್ಳೊಳ್ಳಿ, ದೇವರಾಜ ರಾಠೋಡ, ರಾಜು ಜಂಬಗಿ, ಬಸವರಾಜ ಮದ್ರಕಿ, ಸುಭಾಷ ಜಾಪೂರ, ನಾಗಪ್ಪ ರಾಯಚೂರಕರ್, ಮಲ್ಲೇಶ ಭಜಂತ್ರಿ, ಶರಣು ವಸ್ತ್ರದ್, ಕನಕಪ್ಪ ದಂಡಗುಲಕರ್, ಪಿಎಸ್‌ಐ ಶ್ಯಾಮರಾಯ, ಎಎಸ್‌ಐ ಗುಂಡಪ್ಪ, ದೊಡ್ಡಪ್ಪ ಪೂಜಾರಿ, ಹುಸೇನ ಪಾಶಾ, ಕಾಮಯ್ಯ ಗುತ್ತೇದಾರ, ಜಹೀರ ಅಹ್ಮದ, ಕೃಷ್ಣಪ್ಪ ಕರಣಿಕ, ಭೀಮರಾವ ಸಾಳೊಂಕೆ, ರಫೀಕ್ ಬಾಗಬಾನ್, ಬಸವರಾಜ ಬಿರಾದಾರ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ಮಲ್ಲಿಕಾರ್ಜುನ ಸ್ವಾಗತಿಸಿದರು. ಭಾನವಾ ಸಿಂಗ್ ಪ್ರಾರ್ಥಿಸಿದರು, ಕೆ.ರಮೇಶ ಭಟ್ಟ ಪ್ರಾಸ್ತಾವಿಕ ಮಾನತಾಡಿದರು. ಲೋಹಿತ ಕಟ್ಟಿ ನಿರೂಪಿಸಿದರು. ನಿಂಗಣ್ಣ ಜಂಬಗಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮಕ್ಕೂ ಮೊದಲು ಅಹಮದಾಬಾದ್ ವಿಮಾನ ದುರಂತದಲ್ಲಿ ಮಡಿದವರಿಗೆ ಒಂದು ನಿಮಿಷ ಮೌನ ಆಚರಿಸಿ, ಶೃದ್ದಾಂಜಲಿ ಅರ್ಪಿಸಲಾಯಿತು.

Share post:

spot_imgspot_img

Popular

More like this
Related

ಕಲಬುರಗಿ| ಸಾರಾಯಿ ಕುಡಿಯಲು ಹಣ ಕೊಡದಿದ್ದಕ್ಕೆ ಪತ್ನಿ ಕೊಲೆ; ಪತಿಗೆ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ

ಕಲಬುರಗಿ: ಸಾರಾಯಿ ಕುಡಿಯಲು ಹಣ ಕೋಡದಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿ,...

ಕಲಬುರಗಿ| ಹಲಕಟ್ಟಾ ಶರೀಫ್‍ನಲ್ಲಿ ಉರುಸ್-2025 ಪ್ರಯುಕ್ತ ವಿಶೇಷ ರೈಲು ಸಂಚಾರ 

ಕಲಬುರಗಿ: ಹಲಕಟ್ಟಾ ಶರೀಫನಲ್ಲಿ (ಉರ್ಸ್-ಎ-ಶರೀಫ್) ಉರುಸ್ 2025ರ ಪ್ರಯುಕ್ತ ಕೆಳಕಂಡ ದಿನಾಂಕಗಳಂದು...

ಕಲಬುರಗಿ| ರೈತರ ಒಗ್ಗಟ್ಟಿನಿಂದ ಹಕ್ಕು ಮತ್ತು ನ್ಯಾಯಕ್ಕಾಗಿ ಹೋರಾಟ: ಭೀಮಾಶಂಕರ ಮಾಡಿಯಾಳ

ಕಲಬುರಗಿ: ರೈತರ ಹಿತಾಸಕ್ತಿಗಳನ್ನು ಕಾಪಾಡಲು ಒಗ್ಗಟ್ಟಿನ ಬಲವನ್ನು ತಂದುಕೊಳ್ಳುವುದು ಇಂದಿನ ಅಗತ್ಯವಾಗಿದೆ....

ಕಲಬುರಗಿ| ಜುಲೈ ಮಾಸಾಂತ್ಯಕ್ಕೆ ಜಿಲ್ಲಾ ಕಸಾಪದಿಂದ ಯುವ ಸಾಹಿತ್ಯ ಸಮ್ಮೇಳನ: ವಿಜಯಕುಮಾರ ಪಾಟೀಲ ತೇಗಲತಿಪ್ಪಿ

ಕಲಬುರಗಿ : ಯುವ ಬರಹಗಾರರಿಗೆ ಸ್ಫೂರ್ತಿ ನೀಡಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ...