ಕಲಬುರಗಿ: ನವೋದಯ ತತ್ವಜ್ಞಾನಿ ಮತ್ತು ದಾರ್ಶನಿಕ, ಶಿಕ್ಷಣ ತಜ್ಞ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಶರಣಬಸವೇಶ್ವರ ದೇವಾಲಯದ ಆವರಣದ ದಾಸೋಹ ಮಹಾಮನೆಯಲ್ಲಿ ಶ್ರೀ ಶರಣಬಸವೇಶ್ವರರ ದರ್ಶನ ನಂತರ ಶಿವೈಕ್ಯರಾದರು. ಸಂಸ್ಥಾನದ ಪೂಜ್ಯ ದೊಡ್ಡಪ್ಪ ಅಪ್ಪಾ ಅವರ 9 ನೇ ಪೀಠಾಧಿಪತಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಮತ್ತು ಇತರ ಎಲ್ಲಾ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಗುರುವಾರ ರಾತ್ರಿ 9.23 ಕ್ಕೆ ಶಿವೈಕ್ಯರಾದವರು.
ಈ ವರ್ಷ ನವೆಂಬರ್‍ನಲ್ಲಿ 91 ವರ್ಷ ತುಂಬಬಹುದಾಗಿದ್ದ ಡಾ. ಅಪ್ಪಾಜಿ ಅವರನ್ನು ಉಸಿರಾಟದ ಸೋಂಕಿ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿನ ಸಂದರ್ಶಕರೊಂದಿಗೆ ಮುಕ್ತವಾಗಿ ಸಂವಹನ ನಡೆಸುವ ಮೂಲಕ ಅವರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತು. ಆದಾಗ್ಯೂ, ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ಹೊರಡಿಸಿದ ಆರೋಗ್ಯದ ಪ್ರಮುಖ ಹೇಳಿಕೆ ಪ್ರಕಾರ, ಡಾ. ಅಪ್ಪಾಜಿ ಅವರ ಆರೋಗ್ಯದಲ್ಲಿ ಗುರುವಾರ ಗಂಭೀರ ಬದಲಾವಣೆ ಕಂಡುಬಂದಿತ್ತು.
ಡಾ. ಅಪ್ಪಾಜಿ ಗುರುವಾರ ತಮ್ಮ ಆರೋಗ್ಯ ಏರುಪೇರಿದ್ದರೂ, ಹರ್ಷಚಿತ್ತದಿಂದ ಇರುತಿದ್ದರು. ಕುಟುಂಬ ಎಲ್ಲಾ ಸದಸ್ಯರೊಂದಿಗೆ ಪ್ರೀತಿ, ಮಮತೆಯಿಂದ ಸಮಯ ಕಳೆಯುತ್ತಿದ್ದರು ಎಂದು ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ಹೇಳಿದ್ದರು. ಡಾ. ಅಪ್ಪಾಜಿ ಅವರ ಕೊನೆಯ ಇಚ್ಛೆಯಂತೆ, ಅವರನ್ನು ಸ್ಥಿರ ಉಸಿರಾಟದ ಸ್ಥಿತಿಯಲ್ಲಿ ಶರಣಬಸವೇಶ್ವರ ದೇವಾಲಯಕ್ಕೆ ಸ್ಥಳಾಂತರಿಸಲಾಯಿತು. ಡಾ. ಅಪ್ಪಾಜಿ ಅವರನ್ನು ಶ್ರೀ ಶರಣಬಸವೇಶ್ವರರ ದರ್ಶನ ಪಡೆಯಲು ಮತ್ತು ಸಾಯಂಕಾಲದ ಆರತಿ ಪೂಜೆಗೆ ಸಾಕ್ಷಿಯಾಗಲು ದೇವಾಲಯದ ಗರ್ಭಗುಡಿಗೆ ಕರೆದೊಯ್ಯಲಾಯಿತು. ಡಾ. ಅಪ್ಪಾಜಿ ಅವರನ್ನು ಸಂಜೆ 7.30 ರ ಸುಮಾರಿಗೆ ದಾಸೋಹಮನೆಗೆ ಕರೆದೊಯ್ಯುವ ಮೊದಲು ವೈದ್ಯಕೀಯ ಎಲ್ಲಾ ರೀತಿಯಲ್ಲಿ ಮೇಲ್ವಿಚಾರಣೆ ಮಾಡಲಾದ ವಾಹನದಲ್ಲಿ ಕರೆದುಕೊಂಡು ಹೋಗಲಾಗಿತ್ತು. ಅದೇ ವಾಹನದಿಂದ ದೇವಾಲಯದ ಸುತ್ತಲೂ ಪ್ರದಕ್ಷಣೆ ಹಾಕಿದ್ದರು. ಅಪ್ಪಾಜಿಯವರ ಆದ್ಯಾತ್ಮಿಕ ಜೀವನಕ್ಕೆ ಇದು ಪೂರಕ ಪ್ರಕ್ರಿಯೆಯಾಗಿದೆ.
ಮಹಾಮನೆಯಲ್ಲಿ ಅವರಿಗೆ ತಾತ್ಕಾಲಿಕ ಐಸಿಐ ಅನ್ನು ಸ್ಥಾಪಿಸಲಾಗಿತ್ತು. “ಅವರ ಕೊನೆಯ ಉಸಿರಿನವರೆಗೂ ಎಲ್ಲಾ ಆರೈಕೆ ಮತ್ತುಔಷಧಿಗಳನ್ನು ಮುಂದುವರಿಸಲಾಯಿತು” ಎಂದು ಆಸ್ಪತ್ರೆಯ ಹೇಳಿಕೆಯಾಗಿದೆ.
ಶ್ರೀಶೈಲದ ಸಾರಂಗ ಮಠದ ಜಗದ್ಗುರು ದೇಶಿಕೇಂದ್ರ ಮಹಾಸ್ವಾಮಿಗಳು, ಚೌಡಾಪುರಿ ಮಠದ ಡಾ. ರಾಜಶೇಖರ ಮಹಾಸ್ವಾಮಿಗಳು ಮತ್ತು ಇತರ ಸ್ವಾಮೀಜಿಗಳು ಸೇರಿದಂತೆ ವಿವಿಧ ವೀರಶೈವ ಲಿಂಗಾಯತ ಮಠಗಳ ಸ್ವಾಮೀಜಿಗಳೊಂದಿಗೆ ಕುಟುಂಬದ ಹಿರಿಯ ಸದಸ್ಯರು ಮತ್ತು ಸುದೀರ್ಘ ಚರ್ಚೆ ಮತ್ತು ಸಮಾಲೋಚನೆ ನಡೆಸಿದ ನಂತರ, ಕುಟುಂಬ ಸದಸ್ಯರು ಶುಕ್ರವಾರ ಸಂಜೆ ಡಾ. ಅಪ್ಪಾಜಿ ಅವರ ತಂದೆ ಮತ್ತು ಸಂಸ್ಥಾನದ 7 ನೇ ಪೀಠಾಧಿಪತಿ ಪೂಜ್ಯ ಡಾ. ದೊಡ್ಡಪ್ಪ ಅಪ್ಪಾಜಿ ಅವರ ಸಮಾಧಿಯ ಬಲಭಾಗದಲ್ಲಿರುವ ಗರ್ಭಗುಡಿಯ ಎದುರಿನಲ್ಲಿ ಶರಣಬಸವೇಶ್ವರ ದೇಗುಲ ಆವರಣದಲ್ಲಿ ಡಾ. ಅಪ್ಪಾಜಿ ಅವರ ಅಂತಿಮ ವಿಧಿವಿಧಾನಗಳನ್ನು ನಡೆಸಲು ನಿರ್ಧರಿಸಿದರು.
ಡಾ. ಅಪ್ಪಾಜಿಯವರು ಸಂಜೆ 7.30 ಕ್ಕೆ ದಾಸೋಹಮಹಾಮನೆಗೆ ಬಂದ ನಂತರ ಅಪ್ಪಾಜಿಯವರನ್ನು ಮೊದಲು ಭೇಟಿ ಮಾಡಿದ ಪ್ರಮುಖರಲ್ಲಿ ಶ್ರೀ ಶರಣಬಸಪ್ಪ ನಿಷ್ಠಿ, ಶ್ರೀ ಲಿಂಗರಾಜಪ್ಪ ಅಪ್ಪ, ಶ್ರೀ ಪ್ರಭುರಾಜಪ್ಪ ಅಪ್ಪ, ಮಾಜಿ ಕುಲಪತಿ ಡಾ. ನಿರಂಜನ್ ನಿಷ್ಠಿ, ನಂದಿನಿ ನಿಷ್ಠಿ, ಶ್ರೀ ಬಸವರಾಜ್ ಭೀಮಳ್ಳಿ, ಎಚ್‍ಕೆಇ ಸೊಸೈಟಿಯ ಉಪಾಧ್ಯಕ್ಷ ಶ್ರೀ ರಾಜು ಭೀಮಳ್ಳಿ, ಶ್ರೀ ಶರಣು ಮೋದಿ, ಶ್ರೀ ದತ್ತಾತ್ರೇಯ ಪಾಟೀಲ್ ರೇವೂರ್, ಕುಲಪತಿ ಪೆÇ್ರ. ಅನಿಲ್ ಕುಮಾರ್ ಬಿಡವೆ, ಡೀನ್ ಲಕ್ಷ್ಮಿ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಕಿರಣ್ ಮಾಕಾ ಮತ್ತು ಇತರರು ಸೇರಿದ್ದರು.
ಪೂಜ್ಯ ಡಾ. ಅಪ್ಪಾಜಿ ಅವರ ಶಿವೈಕ್ಯರಾದ ಸುದ್ದಿ ದೇವಾಲಯದ ಆವರಣವು ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ, ಸಂಸ್ಥಾನದಲ್ಲಿ ನೂರಾರು ಭಕ್ತರು ಭಾರವಾದ ಎದೆಯಿಂದ ಗದ್ಗರಿತರಾಗಿ ಆಗಮಿಸಿದರು. ಅನ್ನದಾತ ಎಂದರು ಹಲವರು, ಆಶ್ರಯದಾತ ಎಂದು ಕಣ್ಣಿರ ಸುರಿಸುತ್ತ ಡಾ. ಅಪ್ಪಾಜಿ ಅವರ ಪಾರ್ಥಿವ ಶರೀರದ ದರ್ಶನ ಪಡೆಯಲು ದಾಸೋಹಮನೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು.
ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್, ಪೊಲೀಸ್ ಆಯುಕ್ತ ಡಾ. ಶರಣಪ್ಪ ಮತ್ತು ಹಿರಿಯ ಪೆÇಲೀಸ್ ಅಧಿಕಾರಿಗಳು ದೇವಾಲಯದ ಆವರಣಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಅಂತಿಮ ದರ್ಶನದ ದಿನಾಂಕ ಮತ್ತು ಸಮಯದ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದರು ಮತ್ತು ದಾಸೋಹಮನೆಯ ಮುಖ್ಯ ದ್ವಾರದ ಪಕ್ಕದಲ್ಲಿರುವ ಅನುಭವ ಮಂಟಪ ವೇದಿಕೆಯಲ್ಲಿ ಪೂಜ್ಯ ಡಾ. ಅಪ್ಪಾಜಿಯವರ ಪಾರ್ಥಿವ ಶರೀರವನ್ನು ಭಕ್ತರ ಶಾಂತಿಯುತ ದರ್ಶನಕ್ಕಾಗಿ ಭದ್ರತಾ ವ್ಯವಸ್ಥೆಗಳೊಂದಿಗೆ ಮಾಡಲಾಗಿದೆ.