ಕಲಬುರಗಿ: ಅಟಲ್‌ಜೀ ಜನಸ್ನೇಹಿ ಕೇಂದ್ರದ ಮೂಲಕ ಜೂನ್-2025ರ ಮಾಹೆಯಲ್ಲಿ ಸ್ವೀಕರಿಸಲಾಗಿರುವ 49,581 ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲೇ ಶೇ. 99.95 ರಷ್ಟು ವಿಲೇವಾರಿ ಮಾಡಿ ರಾಜ್ಯದಲ್ಲಿಯೇ ಮೂರನೇ ಸ್ಥಾನ ಪಡೆದಿದ್ದಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಅವರ ತಂಡಕ್ಕೆ ಕಂದಾಯ ಆಯುಕ್ತ ಪೊಮ್ಮಲ ಸುನೀಲಕುಮಾರ್ ಅವರು ಪ್ರಶಂಶನೆ ವ್ಯಕ್ತಪಡಿಸಿದ್ದಾರೆ.
ಜೂನ್-2025ರ ಮಾಹೆಯಲ್ಲಿ ಸ್ವೀಕರಿಸಲಾಗಿರುವ 49,581 ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲೇ ಶೇ. 99.95 ರಷ್ಟು ವಿಲೇವಾರಿ ಮಾಡಿ 6.58 ಸಿಗ್ಮಾ ಮೌಲ್ಯವನ್ನು ಪಡೆಯಲಾಗಿದೆ. 8.42 ವಿಲೇವಾರಿ ಸೂಚ್ಯಂಕದ ಪ್ರಕಾರ ಕಲಬುರಗಿ ಜಿಲ್ಲೆಯಲ್ಲಿ 9.42 ಪಟ್ಟು ನಿಗದಿತ ಅವಧಿಗಿಂತ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿರುವುದು ಶ್ಲಾಘನೀಯ ಎಂದು ಪ್ರಸಂಶನಾ ಪತ್ರದಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿನ ಈ ಕಾರ್ಯ ಸಾಧನೆಗೆ ನಾಡ ಕಛೇರಿ/ ಆಟಲ್‌ಜೀ ಜನಸ್ನೇಹಿ ಕೇಂದ್ರದ ಸಿಬ್ಬಂದಿಗಳ ಸಹಕಾರ, ಕಾರ್ಯತತ್ಪರತೆ ಕಾರಣವಾಗಿರುತ್ತದೆ. ಇದಕ್ಕಾಗಿ ಅಟಲ್ ಜನಸ್ನೇಹಿ ನಿರ್ದೇಶನಾಲಯದ ಪರವಾಗಿ ನಿಮ್ಮ ತಂಡಕ್ಕೆ ನನ್ನ ಅಭಿನಂದನೆಯನ್ನು ಎಂದಿರುವ ಸುನೀಲ್ ಕುಮಾರ ಅವರು, ಮುಂದಿನ ದಿನಗಳಲ್ಲಿಯೂ ಸಹಾ ನಿಮ್ಮಿಂದ ಇದೇ ರೀತಿಯ ಸಹಕಾರ ನಿರೀಕ್ಷಿಸಲಾಗಿದೆ ಎಂದು ಡಿ.ಸಿ ಬಿ.ಫೌಜಿಯಾ ತರನ್ನುಮ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.