ಕಲಬುರಗಿ | ತಳವಾರ ಸಮಾಜದ ವಿಷಯದಲ್ಲಿ ಗೊಂದಲವಿಲ್ಲ; ರಾಜಕೀಯವಿದೆ: ಪ್ರಮೋದ ಮಧ್ವರಾಜ

Date:

Share post:

ಕಲಬುರಗಿ: ತಳವಾರ ಸಮುದಾಯ ಸಂವಿಧಾನ ಮತ್ತು ಕಾನೂನು ಬದ್ಧವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿ ಐದು ವರ್ಷ ಕಳೆದಿದೆ, ಆದರೆ ರಾಜ್ಯ ಸರ್ಕಾರ ಮತ್ತು ಇಲ್ಲಿನ ಜನಪ್ರತಿನಿಧಿಗಳು ಅಧಿಕಾರಿಗಳು ವಿನಾಕಾರಣ ಗೊಂದಲ ಸೃಷ್ಟಿ ಮಾಡಿ ಮಾಡುವುದರ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ ಮಧ್ವರಾಜ ಹೇಳಿದರು.

 

ಕರ್ನಾಟಕ ರಾಜ್ಯ ತಳವಾರ ಸಮಾಜ ಪಾದಯಾತ್ರೆಯ ಮೂಲಕ ಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಬೆಂಬಲ ಸೂಚಿಸಿ ಮಾತನಾಡಿದರು.

ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಿತ್ತು. ರಾಜ್ಯದಲ್ಲಿ ಕೆಲವೊಬ್ಬರು ಗೊಂದಲ ಸೃಷ್ಟಿ ಮಾಡಿದ್ದರಿಂದ, ರಾಜ್ಯ ಸರ್ಕಾರ ಅದನ್ನು , ಮೂರರಿಂದ ಏಳು ಪಸೆರ್ಂಟ್ ಹೆಚ್ಚಿಗೆ ಮಾಡಿ ತಳವಾರ ಸಮಾಜವನ್ನು ಹಿಂದುಳಿದ ವರ್ಗದಿಂದ ತೆಗೆದು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದರು.

ತಳವಾರದಲ್ಲಿ ಯಾವುದೇ ಗೊಂದಲ ಇಲ್ಲ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿ ಮಾಡಿ ಹೆಚ್ಚಾಗಿ ಅನ್ಯಾಯ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ 88ಎಚ್ ಹೊರತುಪಡಿಸಿ ಮತ್ತೊಂದು ತಳವಾರ ಇಲ್ಲ. ಆದರೆ ಹಿಂದುಳಿದ ವರ್ಗದಲ್ಲಿ ಇನ್ನೊಂದು ತಳವಾರ ಇದೆ ಎಂದು ಹೇಳುತ್ತಿದ್ದಾರೆ. ಹೇಳಿಕೆಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳ ಇಲ್ಲದಿದ್ದರೂ ಕೂಡ ಬರಿ ಮೌಖಿಕವಾಗಿ ಹೇಳಿ ತಳವಾರ ಸಮುದಾಯಕ್ಕೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಾಣ ಕುರುಡರು, ಮೂಗರೆಂತೆ ವರ್ತಿಸುತ್ತಿದ್ದಾರೆ. ಈ ಭಾಗದಲ್ಲಿ ಎಸ್.ಟಿ ವಿಷಯದಲ್ಲಿ ಕುರಿತು ನಿರಂತರವಾಗಿ ರಾಜಕೀಯ ನಡೆಯುತ್ತಲೇ ಇದೆ. ತಮ್ಮ ರಾಜ ಕಾರಣಕ್ಕಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯಗಳಲ್ಲಿ ಇಲ್ಲಸಲ್ಲದ ಕಟ್ಟು ಕಥೆಗಳು ಹೇಳುತ್ತಾ ಗೊಂದಲ ಸೃಷ್ಟಿ ಮಾಡುತ್ತಾರೆ. ಮುಂದಿನ ದಿನದಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತಳವಾರ ಸಮಾಜದ ರಾಜ್ಯಾಧ್ಯಕ್ಷರಾದ ಡಾ. ಸರ್ದಾರ ರಾಯಪ್ಪ, ಹಿರಿಯ ಮುಖಂಡರಾದ ಮಾಜಿ ಕಾಡಾ ಅಧ್ಯಕ್ಷರಾದ ಶರಣಪ್ಪ ತಳವಾರ, ಎಂ. ಚಿನ್ನಸ್ವಾಮಿ, ರೇವಣಸಿದ್ದಪ್ಪಗೌಡ ಎಂ. ಕಮಾನಮನಿ, ರಮೇಶ ನಾಟಿಕಾರ, ಬಸವರಾಜ ಸಪ್ಪನಗೊಳ,ಶಾಂತಪ್ಪ ಕೂಡಿ, ಅಮೃತ್ ಡಿಗ್ಗಿ, ವಿದ್ಯಾಧರ ಮಂಗಳೂರು, ಸಂತೋಷ ತಳವಾರ, ಬಾಪುಗೌಡ ಮಾಲಿಪಾಟೀಲ್, ಅಶೋಕ ಕಂಕಿ, ಪ್ರೇಮ್ ಕೋಲಿ, ಈರಣ್ಣ ಹೊಸಮನಿ, ಬೆಳ್ಳಪ್ಪ ಕಣದಾಳ, ಸಿದ್ದು ನಾರಾಯಣಪುರ, ಹುಲಿಕಂಟ್ರಾಯ, ಭೀಮರಾಯ ತಳವಾರ, ಪ್ರಕಾಶ ಮಂದೇವಾಲ ಸೇರಿದಂತೆ ಸಮಾಜದ ಮುಖಂಡರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಶರಬಸಪ್ಪ ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ,...

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....