ಕಲಬುರಗಿ: ಐ.ಟಿ.ಐ. ಮುಗಿಸಿದ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಇದೇ ಜುಲೈ 3 ರಂದು ಬೆಳಿಗ್ಗೆ 10 ಗಂಟೆಗೆ ಅಫಜಲಪುರ (ಚೌಡಾಪೂರ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಅಫಜಲಪುರ (ಚೌಡಾಪುರ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ತುಮಕೂರು ಇನ್‍ಕ್ಯಾಪ್ ಪ್ರೈವೇಟ್ ಲಿ., ಬೆಂಗಳೂರಿನ ರಾಣೆ ಲೈಟ್ ಮೆಟಲ್ ಕಾಸ್ಟಿಂಗ್ ಇಂಡಿಯಾ ಹಾಗೂ ಹೈದ್ರಾಬಾದಿನ ಸ್ಕೈಡರ್ ಎಲೆಕ್ಟ್ರಿಕ್ ಇಂಡಿಯಾ ಪ್ರೈ. ಲಿಮಿಟೆಡ್ ಮತ್ತು ಗ್ರ್ಯಾನ್ಯುಲರ್ ಇಂಡಿಯಾ ಲಿಮಿಟೆಡ್ ಕಂಪನಿ ವತಿಯಿಂದ ಈ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಐಟಿಐ ಪಾಸಾದ ಹಾಗೂ ಐಟಿಐ ಅಂತಿಮ ವರ್ಷದಲ್ಲಿರುವ ಎಲ್ಲಾ ವೃತ್ತಿಗಳ ತರಬೇತಿದಾರರು ಮೂಲ ದಾಖಲಾತಿಗಳು ಹಾಗೂ ಪಾಸ್‍ಪೋರ್ಟ್ ಸೈಜಿನ ಭಾವಚಿತ್ರದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಕ್ಯಾಂಪಸ್ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ತರಬೇತಿ ಸಂಸ್ಥೆಯ ದೇವಿಂದ್ರಪ್ಪಾ ಕುಂಬಾರ ಇವರ ಮೊಬೈಲ್ ಸಂಖ್ಯೆ 7483673282 ಗೆ ಸಂಪರ್ಕಿಸಲು ಕೋರಲಾಗಿದೆ.