ಕಲಬುರಗಿ: ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಜಲಮೂಲ ನದಿಗಳಲ್ಲಿ ಒಂದಾದ ಬೆಣ್ಣೇತೋರಾ ನದಿಯ ಮೇಲ್ಭಾಗದ ಪ್ರದೇಶದಲ್ಲಿ ವಿಪರಿತ ಮಳೆಯಾಗುತ್ತಿರುವುದರಿಂದ ಮಣ್ಣು ಮಿಶ್ರಿತ ಕಲುಷಿತ ನೀರು ಬರುತ್ತಿದ್ದು, ಹಳೇ ಜಲಶುದ್ಧೀಕರಣ ಕೇಂದ್ರದಿಂದ ಸರಬರಾಜು ಆಗುವ ಈ ಕೆಳಕಂಡ ಬಡವಾಣೆಗಳಲ್ಲಿ ಇದೇ ಜುಲೈ 23 ರಿಂದ 27 ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕಲಬುರಗಿ ಕೆಯುಡಬ್ಲ್ಯೂಎಸ್ಎಂಪಿ-ಕೆಯುಐಡಿಎಫ್ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಗಾಜಿಪೂರ, ಮಕ್ತಂಪುರ, ಮೋಮಿನಪುರ ಎ/ಬಿ, ಗಂಜ ಕಾಲೋನಿ, ಬ್ಯಾಂಕ್ ಕಾಲೋನಿ, ಖಾಜಾ ಕಾಲೋನಿ, ಜಗತ ಬಡಾವಣೆ (ಕೆಳಗೆ & ಮೇಲೆ) ಪೊಲೀಸ್ ಕಾಲೋನಿ, ಐವಾನ್ ಶಾಹಿ, ಗುಲಾಬ್ ವಾಡಿ, ಅಕ್ತರ ಕಂಪೌಂಡ್, ನಯಾ ಮೊಹಲ್ಲಾ, ಮಹಡಿ ಮೋಹಲ್ಲಾ, ಸದರ್ ಮೊಹಲ್ಲಾ, ಕಣಕಿ ಬಜಾರ, ಬಂಬು ಬಜಾರ ಭಾಗಶಃ ಐವಾನ್ ಶಾಹಿ ಬ್ಯಾಂಕ್ ಕಾಲೋನಿ, ಶಿವಾಜಿ ನಗರ, ಭವಾನಿ ನಗರ, ಗಾಂಧಿ ನಗರ, ನಂದಿ ಕಾಲೋನಿ ತಾಜ್ ನಗರ, ಚನ್ನವೀರ ನಗರ, ಸುವರ್ಣ ನಗರ ತಾಂಡಾ, ಶಹಬಜಾರ, ಮುನಿಮ್ ಸಂಘ, ಭಾರತ ಕಾಲೋನಿ, ಬಹುಮನಿ ಚೌಕ್, ಸರಾಫ ಬಜಾರ ಗಣೇಶ ಮಂದಿರ, ಸುಂದರ ನಗರ, ಬಾಪುನಗರ ಹಾಗೂ ಮತ್ತಿತರ ಬಡಾವಣೆಗಳಲ್ಲಿ ನೀರು ಸಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ನಗರದ ಸಾರ್ವಜನಿಕರು ಮಹಾನಗರ ಪಾಲಿಕೆ, ಕೆಯುಐಡಿಎಫ್ಸಿ ಹಾಗೂ ಮೆ|| ಎಲ್ ಆಂಡ್ ಟಿ ಕಂಪನಿಯೊಂದಿಗೆ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.