ಕಲಬುರಗಿ: ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಅನೇಕ ಕಡೆಗಳಲ್ಲಿ ರಸ್ತೆ ಸೇತುವೆಗಳು ಜಲಾವೃತಗೊಂಡು ಸಂಚಾರಕ್ಕೆ ಅಡ್ಡಿಯಾಗಿರುವ ಘಟನೆಗಳು ನಡೆಯುತ್ತಿವೆ.
ಅದರಂತೆಯೇ ಚಿಂಚೋಳಿ ತಾಲೂಕಿನ ಗಡಿಯಲ್ಲಿರುವ ಕೋತಲಾಪುರ ಸಮೀಪದ ರಾಜ್ಯ ಹೆದ್ದಾರಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಹಾಗಾಗಿ ಚಿಂಚೋಳಿಯಿಂದ ತೆಲಂಗಾಣಕ್ಕೆ ತೆರಳುವ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಚಿಂಚೋಳಿಯಿಂದ ಮಿರಿಯಾಣ, ತಾಂಡೂರುಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದಾಗಿದೆ.
ಸೇತುವೆ ಸಂಪೂರ್ಣ ಜಲಾವೃತಗೊಂಡಿರುವ ಕಾರಣ ಪ್ರತ್ಯೇಕ ಕಡೆಗಳಲ್ಲಿ ಸಂಚರಿಸದೆ ವಾಹನಗಳು ಸ್ಥಳದಲ್ಲೇ ನಿಂತಿವೆ.