ಕಲಬುರಗಿ: ಜಾತಿ ಗಣತಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಹೃದಯಘಾತದಿಂದ ಚಿಂಚೋಳಿ ತಾಲೂಕಿನ ಚತ್ರಸಾಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿ ಶಾಲೆಯ ಮುಖ್ಯಗುರು ನಾಗಶೆಟ್ಟಿ ಬಾಸಪಳ್ಳಿ ಮೃತ ಪಟ್ಟಿರು ಘಟನೆ ನಡೆದಿದೆ.
ಚಿಂಚೋಳಿ ತಾಲೂಕಿನ ಬುರಗಪಳ್ಳಿ ಗ್ರಾಮದವರಾದ ನಾಗಶೆಟ್ಟಿ ಅವರು, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆ ವೇಳೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆ ಶಾಲೆಯ ಖುರ್ಚಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುವಾಗಲೇ ಅಸ್ವಸ್ಥರಾಗಿ ಕುಸಿದು ಬಿದ್ದು, ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸರಕಾರದ ಕೆಲಸ ದಕ್ಷ, ಪ್ರಮಾಣಿಕತೆಯಿಂದ ಮಾಡುತ್ತಿದ್ದ ನಾಗಶೆಟ್ಟಿ ಅವರ ಸಾವು ತಾಲೂಕಿಗೆ ತುಂಬಲಾರದ ನಷ್ಟವಾಗಿದೆ. ಉತ್ತಮ ಶಿಕ್ಷಕನನ್ನು ಕಳೆದುಕೊಂಡ ಶಿಕ್ಷಣ ಇಲಾಖೆ ಹಾಗೂ ತಾಲೂಕು ಬಡವಾಗಿದೆ. ಸ್ವಗ್ರಾಮ ಬುರುಗಪಳ್ಳಿಯ ಸ್ವಂತ ಹೊಲದಲ್ಲಿ ಶುಕ್ರುವಾರ ಅಂತ್ಯಕ್ರಿಯೆ ನಡೆಯಿತು.
ಒಂದು ಕೋಟಿ ಪರಿಹಾರಕ್ಕೆ ಒತ್ತಾಯ:
55 ವರ್ಷ ಮೇಲ್ಪಟ್ಟವರಿಗೆ ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬಾರದು ಎನ್ನುವ ಆದೇಶವಿದ್ದರೂ, ಶಿಕ್ಷಕ ನಾಗಶೆಟ್ಟಿ ಅವರನ್ನು ನೇಮಿಸಿಲಾಗಿದೆ. ಒಳ ಮೀಸಲಾತಿ ಜಾತಿಗಣತಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಮುಖ್ಯಗುರು ನಾಗಶೆಟ್ಟಿ ಬಾಸಪಳ್ಳಿ ಅವರ ಕುಟುಂಬಕ್ಕೆ ಸರಕಾರ 1 ಕೋಟಿ ಪರಿಹಾರ ಘೋಷಿಸಬೇಕು ಎಂದು ಅಖಿಲ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕ ಘಟಕದ ಅಧ್ಯಕ್ಷ ವಕೀಲ ಶರಣುಪಾಟೀಲ ಮೋತಕಪಳ್ಳಿ ಒತ್ತಾಯಿಸಿದ್ದಾರೆ.