ಕಲಬುರಗಿ: ಚಿಂಚೋಳಿ ತಾಲೂಕಿನ ಗಡಿಭಾಗವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಅವರಿಗೆ ಮನವಿ ಸಲ್ಲಿಸಿ, ಒತ್ತಾಯಿಸಲಾಯಿತು.
ಚಿಂಚೋಳಿ ತಾಲೂಕಿನ ತೆಲಂಗಾಣ ಗಡಿಭಾಗದ ಅಂಚಿಗೆ ಇರುವ ಶಾದಿಪೂರ ಮತ್ತು ಕುಂಚಾವರಂ ಗ್ರಾಮಗಳು ಅಭಿವೃದ್ಧಿಯಿಂದ ವಂಚಿತಗೊಂಡಿದ್ದು, ಈ ಭಾಗದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಕುಂಟಿತಗೊಳ್ಳುತ್ತಿರುವ ಶೈಕ್ಷಣಿಕ ಗುಣಮಟ್ಟ ಸುಧಾರಣಗೆ ತರಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಶಾದಿಪೂರ್ ಪಂಚಾಯತ್, ಕುಂಚಾರಾಮ ಪಂಚಾಯತ್ ವೆಂಕಟಾಪುರ ಪಂಚಾಯತ್ ನಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಸರಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಬೇಕು, ಹೊಸ ಬಸ್ ನಿಲ್ದಾಣ ನಿರ್ಮಾಣ, ಶಾದಿಪೂರ ಕೆರೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡುವುದು, ಚಾಪ್ಲಾನಾಯಕ ತಾಂಡಾದಲ್ಲಿನ ಸಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ, ಶಾದಿಪೂರ, ಕುಂಚಾರಾಮ್ ಮತ್ತು ವೆಂಕಟಾಪುರ್ ಗ್ರಾಮ ಪಂಚಾಯತಿ ಕಾರ್ಯಾಲಯ ಸಿಬ್ಬಂದಿಗಳು ಸಮಯಕ್ಕೆ ಕಾರ್ಯಾಲಯಕ್ಕೆ ಬಂದು ಜನ ಸಾಮಾನ್ಯರಿಗೆ ಸರಕಾರಿ ಸೇವೆ ನೀಡಲು ಕ್ರಮಕೈಗೊಳಬೇಕು ಎಂದು ಒತ್ತಾಯಿಸಿ, ಕರವೇ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸೇನೆಯ ತಾಲೂಕಾಧ್ಯಕ್ಷ ಲಿಂಬಾಜಿ ಚವ್ಹಾಣ್, ಪಾಂಡು ಜಾಧವ, ಪ್ರಭು ಗೌಡ, ಲಿಂಬು ಸಿ ರಾಠೋಡ್, ಸಂತೋಷ ರಾಠೋಡ್, ಮೋಹನ್ ಚವಾಣ್, ಸಂಜು ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.