ಕಲಬುರಗಿ| ಗೋದುತಾಯಿ ಕಾಲೇಜಿನಲ್ಲಿ ಒಂದು ದಿನದ ರಾಜ್ಯ ಮಟ್ಟದ ವಿಚಾರಸಂಕಿರಣ

Date:

Share post:

ಕಲಬುರಗಿ : ಇಂಗ್ಲೀಷ್ ಸಾಹಿತ್ಯವು ಬಹಳ ಹಳೆಯ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಪುದುಚರಿ ಕರಿಕಲ್ ಅರಿಗರ ಅಣ್ಣ ಸರಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿಲಿಯನಸಿದ್ದ ಕೆ.ಪೈಗೊಂಡೆ ಹೇಳಿದರು.

ನಗರದ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ರವಿವಾರ ಇಂಗ್ಲೀಷ್ ವಿಭಾಗದಿಂದ ಹಮ್ಮಿಕೊಂಡ ಹಿಸ್ಟರಿ ಆಫ್ ಇಂಗ್ಲೀಷ್ ಲಿಟರೇಚರ್ ಆನ್ ಎಕ್ಸಪ್ಲೋರೇಷನ್ ಎಂಬ ವಿಷಯ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಇಂಗ್ಲೀಷ್ ಸಾಹಿತ್ಯವು ಇಂಗ್ಲೀಷ್ ಮಾತನಾಡುವ ಪ್ರಪಂಚದಿoದ ಇಂಗ್ಲೀಷ್ ಭಾಷೆಯಲ್ಲಿ ಬರೆಯಲ್ಪಟ್ಟ ಸಾಹಿತ್ಯವಾಗಿದೆ. ಇದು 1400 ವರ್ಷಗಳಿಗೂ ಹೆಚ್ಚು ಕಾಲ ಅಭಿವೃದ್ಧಿಗೊಂಡಿದೆ. ಕವಿ ಮತ್ತು ನಾಟಕಕಾರ ವಿಲಿಯಂ ಶೇಕ್ಸಪಿಯರ್ ಇಂಗ್ಲೀಷ್ ಭಾಷೆಯ ಶ್ರೇಷ್ಠ ಬರಹಗಾರರಾಗಿ ಇಂಗ್ಲೀಷ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. 16ನೇ ಶತಮಾನದ ಅಂತ್ಯ ಮತ್ತು 18ನೇ ಶತಮಾನದ ಆರಂಭದ ನಡುವೆ ಬ್ರಿಟಿಷ್ ಸಾಮ್ರಾಜ್ಯದ ಬೆಳವಣಿಗೆಯೊಂದಿಗೆ ಇಂಗ್ಲೀಷ್ ಭಾಷೆ ಪ್ರಪಂಚದಾದ್ಯoತ ಹರಿಡಿತು ಎಂದು ಇಂಗ್ಲೀಷ್ ಸಾಹಿತ್ಯದ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು ಎಂದರು.

ವೇದಿಕೆ ಮೇಲೆ ಪ್ರಾಧ್ಯಾಪಕರಾದ ಡಾ.ಸೀಮಾ ಪಾಟೀಲ, ಕೃಪಾಸಾಗರ ಗೊಬ್ಬುರ್ ಇದ್ದರು. ಪ್ರೀತಿ ಬಿರಾದಾರ ಮುಖ್ಯ ಅತಿಥಿಗಳ ಪರಿಚಯ ಮಾಡಿದರೆ, ಭೀಮಸೇನ್ ಜೋಷಿ ಸ್ವಾಗತಿಸಿದರು. ಕು.ಜವೇರಿಯಾ ಅಂಜುಮ್‌ಶೇಖ ನಿರೂಪಿಸಿ, ವಂದಿಸಿದರು. ಕು.ಸ್ಪೂರ್ತಿ ಪಾಂಚಾಳ ಪ್ರಾರ್ಥಿಸಿದರು.

Share post:

spot_imgspot_img

Popular

More like this
Related

ಕಲಬುರಗಿ| ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಶರಬಸಪ್ಪ ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ,...

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....