ಕಲಬುರಗಿ| ಖ್ಯಾತ ಚಿತ್ರ ಕಲಾವಿದರಿಗೆ ಅಭಿನಂದನಾ ಸಮಾರಂಭ 

Date:

Share post:

ಕಲಬುರಗಿ: ನಗರದಲ್ಲಿ ಮುಹಿಬನ್ನೆ ಉರ್ದು ಆಯೋಜಿಸಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿ ರಾಜ್ಯ ವಾರ್ಷಿಕ ಪ್ರಶಸ್ತಿ ಪುರಸ್ಕೃತ ರೆಹಮಾನ್ ಪಟೇಲ್ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಅಯಾಜುದ್ದೀನ್ ಪಟೇಲ್ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಈ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಫರಾನ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಅಬ್ದುಲ್ ಹಮೀದ್ ಮಾತನಾಡಿ, ಇಂದಿನ ಸಮಾಜದಲ್ಲಿ ಕಲಾವಿದರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಕಲಾವಿದರಿಂದ ಮುಂದಿನ ಪೀಳಿಗೆಗೆ ಇತಿಹಾಸ, ಕಲೆ, ಸಾಂಸ್ಕೃತಿಕ ಸೇರಿದಂತೆ ಇತರೆ ವಿಷಯಗಳನ್ನು ಪರಿಚಯಿಸುವ ದೊಡ್ಡ ಕಾರ್ಯ ಆಗಲಿದೆ ಎಂದರು.

ಮುಹಿಬನ್ನೆ ಉರ್ದು ಅಧ್ಯಕ್ಷ ಡಾ.ಫಹೀಮುದ್ದೀನ್ ಪೀರಜಾದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ ಅನೀಸ್ ಸಿದ್ದಿಕಿ, ಸದಸ್ಯ ಖಾಜಾ ಪಾಷಾ ಇನಾಮದಾರ ವೇದಿಕೆ ಹಂಚಿಕೊಂಡರು. ಸೈಯದ್ ತಯಾಬ್ ಅಲಿ, ಗಜಾನ್‌ಫರ್ ಇಕ್ಬಾಲ್, ರಿಜ್ವಾನ್ ಉರ್ ರೆಹಮಾನ್, ಮುಜೀಬ್ ಅಲಿ ಖಾನ್, ಯೂಸುಫ್, ಮುಬೀನ್ ಝಕಾಮ್ ಸೇರಿದಂತೆ ಮುಂತಾದ ಉರ್ದು ಬರಹಗಾರರು ಮತ್ತು ಬುದ್ಧಿಜೀವಿಗಳು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಜ್ಞಾನಕ್ಕೆ ಸಮಾನವಾದುದ್ದು ಮತ್ತೊಂದಿಲ್ಲ: ಎನ್.ಎಂ.ಬಿರಾದಾರ

ಕಲಬುರಗಿ: ಜಗತ್ತಿನಲ್ಲಿ ಜ್ಞಾನಕ್ಕಿರುವುಷ್ಟು ಬೆಲೆ ಬೇರೆ ಯಾವ ವಸ್ತುವಿಗೂ ಇಲ್ಲ ಎಂದು...

ಕಲಬುರಗಿ| ದಂತ ವೈದ್ಯಕೀಯ ಕ್ಷೇತ್ರವು ಸ್ಪರ್ಧಾತ್ಮಕ ಕ್ಷೇತ್ರವಾಗಿ ಬೆಳೆದಿದೆ: ಡಾ. ಶಿವಶರಣ ಕೆ.

ಕಲಬುರಗಿ: ಇತ್ತಿಚಿನ ದಿನಗಳಲ್ಲಿ ದಂತವೈದ್ಯಶಾಸ್ತ್ರವು ಹೆಚ್ಚು ಸ್ಪರ್ಧಾತ್ಮಕ ಕ್ಷೇತ್ರವಾಗಿ ಬೆಳೆಯುತ್ತಿದೆ, ಹಾಗಾಗಿ...

ಕಲಬುರಗಿ| ಯುಪಿಎಸ್ಸಿ, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ತರಬೇತಿಗೆ ಅರ್ಜಿ ಆಹ್ವಾನ

ಕಲಬುರಗಿ: ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ 2025-26ನೇ ಸಾಲಿಗೆ ಯುಪಿಎಸ್ಸಿ, ಕೆಎಎಸ್ ಸೇರಿದಂತೆ ವಿವಿಧ...

ಬೀದರ್| ಭಿಕ್ಷಾಟನೆ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು ಸಹಕರಿಸಿ : ಡಿ.ಸಿ ಶಿಲ್ಪಾ ಶರ್ಮಾ

ಬೀದರ್ : ಜಿಲ್ಲೆಯ ಸಾರ್ವಜನಿಕರು ಭಿಕ್ಷೆ ಬೇಡುತ್ತಿರುವುದು ಕಂಡು ಬಂದರೆ ಅವರಿಗೆ...