ಕಲಬುರಗಿ: ಕೇಂದ್ರ, ರಾಜ್ಯ ಸರಕಾರಗಳ ನೀತಿಗಳನ್ನು ಖಡಿಸಿ, ಸಂಯುಕ್ತ ಹೋರಾಟ ಸಮಿತಿ ಕರ್ನಾಟಕ ವತಿಯಿಂದ ಇದೇ ಜು.9ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ. ಬಂಪರ್ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಒಂದೆಡೆ ಬರ, ಇನ್ನೊಂದೆಡೆ ನೆರೆ. ಎರಡೂ ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದೇ ರೈತ ಕಂಗಾಲಾಗುವಂತೆ ಮಾಡಿದೆ. ಹೊರ ದೇಶದ ತೊಗರಿ ಇಂಪೋರ್ಟ ಮಾಡಿಕೊಂಡು ರೈತರ ತೊಗರಿ ಕಟಾವು ಮಾಡುವ ಸಂಧರ್ಭದಲ್ಲಿ ಮಾರುಕಟ್ಟೆಗೆ ಹೊರದೇಶದ ತೊಗರಿ ತಂದು ಇಡೀ ರೈತರ ಮಾರುಕಟ್ಟೆ ನೆಲಕಚ್ಚಿಹೊಗಿದೆ ತೊಗರಿ ಮಾರ್ಕೆಟಿಂಗ್ ಸತ್ಯಾನಾಸ್ ಆಗಿದೆ ಮಾರುಕಟ್ಟೆ ಯಲ್ಲಿ ಬೆಲೆ ಇಲ್ಲದೆ ರೈತರು ಕಂಗಾಲಾಗುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೊಗರಿ ಮಂಡಳಿಯು ಕೆಎಂಎಫ್ ಮಾದರಿಯಂತೆ ಕೆಲಸ ಮಾಡಬೇಕು, ಕೆಎಂಎಫ್‌ನವರು ರೈತರಿಂದ ಹಾಲು ಖರೀದಿಸಿ ಅದರ ಉತ್ಪನ್ನಗಳನ್ನು ತಯಾರಿಸುವಂತೆ ಮಾಡುತ್ತಾರೆ. ತೊಗರಿ ಮಂಡಳಿ ರೈತರಿಂದ ತೊಗರಿ ಖರೀದಿಸಿ ಅದರ ಉತ್ಪನ್ನಗಳನ್ನು ತಯಾರಿಸುವಂತೆ ಆಗಬೇಕು, ಕ್ಷೀರಭಾಗ್ಯದ ಅಡಿ ಶಾಲೆಗಳಿಗೆ ಹಾಲು ನೀಡುವಂತೆ ಅಕ್ಷರ ದಾಸೋಹ ಅಡಿ ತೊಗರಿ ಬೇಳೆ ಪೂರೈಸುವಂತಾಗಬೇಕು, ಇನ್ನೊಂದು ಕಡೆ ಬೆಂಬಲ ಬೆಲೆ MSP ಕಾನೂನು ಜಾರಿ ಮಾಡುವಲ್ಲಿ ಕೇಂದ್ರ ಸರ್ಕಾರ ಮಿನಾಮೇಷ ಎಣಿಸುತ್ತಿದೆ ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಬೆಲೆ ನಿಗದಿ ಪಡಿಸಬೆಕು ಎಂದು ಒತ್ತಾಯಿಸಿದರು.
ಸಿಹಿ ಬೆಳೆದು ಕಹಿ ಉಣ್ಣುವ ಕಬ್ಬು ಬೆಳೆಗಾರರ, ಕಲಬುರ್ಗಿ ಜಿಲ್ಲೆ ತೊಗರಿ ನಾಡು ಎಂಬ ಕೀರ್ತಿಗೆ ಪಾತ್ರವಾದಂತ “ಇತ್ತಿಚೆಗೆ ಕಬ್ಬು ಬೆಳೆಗಾರರ ಕಬ್ಬಿನ ಮೇಲೆ ಅವಲಂಭಿತರಾದ ರೈತರ ಮಂಡಿ ಉದ್ದ ಕಬ್ಬು, ಎದೆಯುದ್ದ ಸಾಲ” ಎಂಬ ಅಪಕೀರ್ತಿಗೂ ಪಾತ್ರವಾಗಿದೆ. ಕೃಷಿ ಕಾಯಕ ಮಾಡುವುದು ಹಿರಿಮೆಯ ಸಂಕೇತ ಎಂಬ ಭಾವನೆ ಕಣ್ಮರೆಯಾಗಿ ಶಾಪವಾಗಿ ಪರಿಣಮಿಸಿದೆ. ಇದರಿಂದಾಗಿ ರೈತರ ಆತ್ಮಹತ್ಯೆಯು ನಿಂತಿಲ್ಲ. ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ನಂತರದ ಎರಡನೇ ಸ್ಥಾನದಲ್ಲಿ ಭಾರತ ಇದೆ. ಅದೇ ರೀತಿ ದೇಶದಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಸುಮಾರು 5 ಕೋಟಿ ಕಬ್ಬು ಬೆಳೆಗಾರರು ದೇಶದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಒಂದು ಟನ್ ಕಬ್ಬು ಬೆಳೆಯಲು ಸುಮಾರು 3500 ರೂಪಾಯಿ ಖರ್ಚು ಬರುತ್ತಿದೆ. ಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಲೆ ವಿಗದಿಪಡಿಸಿದರೆ ಟನ್‌ಗೆ 5000 ರೂ. ಗಳಿಗೂ ಹೆಚ್ಚು ಬೆಲೆ ನೀಡಬೇಕು. ಆದರೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ 2023-24ನೇ ಸಾಲಿಗೆ ಒಂದು ಕೆ.ಜಿ. ಕಬ್ಬಿಗೆ 1 ಪೈಸೆ, ಕ್ವಿಂಟಾಲ್‌ಗೆ 10 ರೂ, ಟನ್ ಗೆ 100 ರೂಪಾಯಿಗಳು ಮಾತ್ರ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದು ರೈತ ಕುಲಕ್ಕೆ ಮಾಡಿದ ಅವಮಾನವಾಗಿದೆ ಎಂದರು.
ಪಿ.ಕೆ.ಪಿ.ಎಸ್ ಸಂಘದ ಸಾಲ ಮರು ಪಾವತಿ ಮಾಡಿದ ರೈತರ ಖಾತೆಗೆ ಕೇಂದ್ರ ಸರ್ಕಾರದ ಪ್ರೋತ್ಸಾಹ ದನ ಹಾಕ ಬೆಕ್ಕು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರಾಜ್ಯ ಸರ್ಕಾರದ 2, 4 ಬಡ್ಡಿ ಸಹಾಯಧನವನ್ನು ಸಂಘದ ಖಾತೆಗೆ ಹಾಕಿ ಸಂಘಕ್ಕಾಗಿ ಬಂದ ಬಡ್ಡಿ ಸಹಾಯಧನವನ್ನು ಸಂಘದ ಆಡಳಿತಕ್ಕಾಗಿ ಮಿಸಲಿಡುವುದು, ಸಂಘದ ರೈತರ ಸಾಲವನ್ನು ಮರುಪಾವತಿಗಾಗಿ ಜಿಲ್ಲಾ ಸಹಕಾರಿ ಬ್ಯಾಂಕಿನವರೆ ಸಂಘದ ಸದಸ್ಯರು ಮನೆಗೆ ಹೋಗಿ ಸಾಲ ನೀಡಬೇಕು, ಟಿಜೆ.ಪಿಎಸ್ ಸಂಘದಿಂದ ರೈತರಿಗೆ ಬಿ ಎಸ್ಸಿ ಮತ್ತು ಪ್ರೋಷನಲ್ ಸಾಲ ಪ್ರೊಸೆಸ್ ಪಿಸ್ ಕಡಿತ. ಗೊಳಿಸುವುದು ನಿಲ್ಲಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭೀಮಾಶಂಕರ ಮಾಡಿಯಾಳ, ಭೀಮಶೆಟ್ಟಿ ಯಂಪಳ್ಳಿ, ನಾಗೆಂದ್ರಪ್ಪಾ ಥಂಬೆ, ಮಹೇಶ್ ಎಸ್.ಬಿ ಅರ್ಜುನ ಗೊಬ್ಬುರು, ಮಲ್ಲಣ್ಣಗೌಡ ಪಾಟೀಲ್, ಎಸ್.ಆರ್ ಕೊಲ್ಲೂರು ಇದ್ದರು.