ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ 23 ನೆಯ ಅವಧಿಗೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ 43ನೇ ವಾರ್ಡ್ ನ ಪಾಲಿಕೆ ಸದಸ್ಯೆ ಆಗಿರುವ ವರ್ಷಾ ರಾಜೀವ್ ಜಾನೆ, ಉಪಮೇಯರ್ ಆಗಿ 45 ನೇ ವಾರ್ಡಿನ ತೃಪ್ತಿ ಶಿವಶರಣಪ್ಪ ಲಾಖೆ ಅವರು ಆಯ್ಕೆಯಾಗಿದ್ದಾರೆ.
36 ಮತಗಳನ್ನು ಪಡೆದ ವರ್ಷಾ ರಾಜೀವ್ ಜಾನೆ ಮೇಯರ್ ಆಗಿದ್ದಾರೆ, ಇತ್ತ 33 ಮತಗಳನ್ನು ಪಡೆದಿರುವ ತೃಪ್ತಿ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಇನ್ನೂ ಬಿಜೆಪಿ – ಜೆಡಿಎಸ್ ಮೈತ್ರಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಗಂಗಮ್ಮ ಮುನ್ನೊಳ್ಳಿ 27 ಮತ ಪಡೆದು ಗಮನ ಸೆಳೆದಿದ್ದಾರೆ. ಜೆಡಿಎಸ್ ನಿಂದ ವಿಜಯಲಕ್ಷ್ಮಿ ರೆಡ್ಡಿ ಅವರು ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದರು.