ಕಲಬುರಗಿ| ಕಲಬುರಗಿ ನಗರದಲ್ಲಿ ಆರ್‌ಸಿಬಿ ಫ್ಯಾನ್ಸ್ ಗೆ ಲಾಠಿ ಚಾರ್ಜ್ ?

Date:

Share post:

ಕಲಬುರಗಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ ಫೈನಲ್ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೇ ಖುಷಿಯಲ್ಲಿ ದೇಶದಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಕಲಬುರಗಿ ನಗರದ ವಿವಿಧೆಡೆ ಸಂಭ್ರಮಿಸಿದ ಫ್ಯಾನ್ಸ್ ರ ಪೊಲೀಸರು ಲಾಠಿ ನೆಲಕ್ಕೆ ಬಡಿದು ಚದುರಿಸಿದ್ದಾರೆ.

ಗೆದ್ದ ಖುಷಿಯಲ್ಲಿ ಅಭಿಮಾನಿಗಳು ಮಧ್ಯ ರಾತ್ರಿ ವರೆಗೂ ನಗರದ ವಿವಿಧೆಡೆ ರ್ಯಾಲಿ, ಘೋಷಣೆಗಳನ್ನು ಕೂಗುತ್ತ ಸಂಭ್ರಮಿಸಿದ್ದಾರೆ. ಇದರ ನಡುವೆ ಜಗತ್ ಸರ್ಕಲ್, ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತ, ಶಹಾಬಜಾರ್, ಕೇಂದ್ರ ಬಸ್ ನಿಲ್ದಾಣ, ಸೂಪರ್ ಮಾರ್ಕೆಟ್, ಲಾಲ್ಗೇರಿ ಕ್ರಾಸ್ ಸೇರಿದಂತೆ ಫ್ಯಾನ್ಸ್ ರಸ್ತೆ ಮಧ್ಯೆಯೇ ಕುಣಿದಾಡುವ ಮೂಲಕ ಸಂಭ್ರಮಿಸಿದ್ದಾರೆ.

ಪ್ರಮುಖ ರಸ್ತೆ ಮಾರ್ಗಗಳಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿರುವಾಗ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಈ ವೇಳೆಯಲ್ಲಿ ಪೊಲೀಸರು ತಮ್ಮ ಲಾಠಿಗಳನ್ನು ನೆಲಕ್ಕೆ ಹೊಡೆಯುವ ಮೂಲಕ ಅವರನ್ನು ಚದುರಿಸಿದ್ದಾರೆ. ಇದೇ ವಿಡಿಯೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಲಾಠಿ ಚಾರ್ಜ್ ಆಗಿಲ್ಲ: ಪೊಲೀಸ್ ಕಮಿಷನರ್ ಸ್ಪಷ್ಟನೆ

ಆರ್‌ಸಿಬಿ ಅಭಿಮಾನಿಗಳು ರಾತ್ರಿ ವಿಜಯೋತ್ಸವ ಆಚರಿಸಿದ್ದಾರೆ. ಯಾವುದೇ ಕಡೆಗಳಲ್ಲಿ ಲಾಠಿ ಚಾರ್ಜ್ ಆಗಿಲ್ಲ ಎಂದು ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ ಅವರು ಸ್ಪಷ್ಟನೆ ನೀಡಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ವಿವಿಧ ಕ್ಷೇತ್ರದ ಸಾಧಕರಿಗೆ ‘ನಡೆ ಚೆನ್ನ ಪ್ರಶಸ್ತಿ’ ಪ್ರದಾನ

ಕಲಬುರಗಿ: ಭಾರತ ದೇಶವೇ ಬಸವ ಸಂಸ್ಕೃತಿ ಹಂಬಲಿಸುತ್ತಿರುವಾಗ ಕರ್ನಾಟಕ ಸರ್ಕಾರ ಬಸವಣ್ಣ...

ಕಲಬುರಗಿ| ದಲಿತ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ಉನ್ನತಮಟ್ಟದ ತನಿಖೆಗೆ ಡಿ.ಜಿ ಸಾಗರ್ ಆಗ್ರಹ

ಕಲಬುರಗಿ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಎನ್ನಲಾಗಿರುವ ದಲಿತ...

ಕಲಬುರಗಿ| ಗ್ರಾಮ ಪಂಚಾಯತಿ ಅಧಿಕಾರಿ, ಸಿಬ್ಬಂದಿ ಕೌನ್ಸಿಲ್ ಪ್ರಕ್ರಿಯೆ ಪೂರ್ಣ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: 2024–25ನೇ ಸಾಲಿನ ಆಯವ್ಯಯ ಘೋಷಣೆಯಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌...

ಕಲಬುರಗಿ| ಕಳ್ಳರಿಬ್ಬರ ಬಂಧನ; ಬೈಕ್, 16.50 ಲಕ್ಷ ಮೌಲ್ಯ ಸ್ವತ್ತು ಜಪ್ತಿ: ಪೊಲೀಸ್ ಕಮೀಷನರ್

ಕಲಬುರಗಿ: ಇಲ್ಲಿನ ಸಬ್ ಅರ್ಬನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಕೀಲಿ...