ಕಲಬುರಗಿ: ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷರಾದ ಭೀಮಾಶಂಕರ ಪಾಟೀಲ ಅವರ ಆದೇಶದ ಮೇರೆಗೆ ಕಲಬುರಗಿ ನಗರ ಘಟಕದ ಅಧ್ಯಕ್ಷರನ್ನಾಗಿ ವಿಕಾಸ ಚವ್ಹಾಣ ಅವರನ್ನು ಸೇನೆಯ ಕಲಬುರಗಿ ಜಿಲ್ಲಾಧ್ಯಕ್ಷರಾದ ರವಿ ದೇಗಾಂವ ಅವರು ನೇಮಕ ಮಾಡಿದರು.
ಜಿಲ್ಲಾಧ್ಯಕ್ಷ ರವಿ ದೇಗಾಂವ ಮಾತನಾಡಿ ನಾಡು, ನುಡಿ, ಗಡಿ, ಜಲ ಭಾಷೆಯ ವಿಷಯದಲ್ಲಿ ಯಾವತ್ತೂ ಯಾರೊಂದಿಗೂ ರಾಜಿಯಾಗದೇ ಕೆಚ್ಚೆದೆಯ ಹೋರಾಟ ಮಾಡುವುದರ ಮೂಲಕ ಕನ್ನಡ ತಾಯಿಯ ಸೇವೆಯನ್ನು ಮಾಡೋಣ ಎಂದರು. ಜಿಲ್ಲೆಯ ಜಲ್ವಂತ ಸಮಸ್ಯೆಗಳ ಬಗ್ಗೆ ಹೋರಾಟ ಕೈಗೆತ್ತಿಕೊಂಡು ಜನಪ್ರತಿನಿಧಿಗಳ, ಅಧಿಕಾರಿಗಳ ಗಮನ ಸೆಳೆದು ಬಗೆಹರಿಸಲು ಪ್ರಯತ್ನಿಸೋಣ. ಸೇನೆಯ ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಎಲ್ಲರೂ ಕಾಯಕದ ಜೊತೆಗೆ ನಾಡಿನ ಸೇವೆಗೆ ಕಂಕಣ ಬದ್ಧರಾಗಿ ಕನ್ನಡದ ಕರ್ನಾಟಕದ ಋಣ ತಿರಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಬು ಕಂಬಾರ್, ರಾಜು ಕಮಲಾಪುರೆ, ಚಂದ್ರು ಸಲಗರ, ಜಯಾನಂದ ಬಿರಾದಾರ್, ಶೇಖರ್ ವಗರಗಿ ಸೇರಿದಂತೆ ಸೇನೆಯ ಪದಾಧಿಕಾರಿಗಳು ಇದ್ದರು.