ಕಲಬುರಗಿ| ಒಂದು ಶಿಕ್ಷಣ ಸಂಸ್ಥೆಗೆ ಅದರ ಹಳೆಯ ವಿದ್ಯಾರ್ಥಿಗಳು ಸಹ ಜೀವಾಳ: ಶಶೀಲ್ ಜಿ ನಮೋಶಿ 

Date:

Share post:

ಕಲಬುರಗಿ: ಒಂದು ಶಿಕ್ಷಣ ಸಂಸ್ಥೆಗೆ ಅದರಲ್ಲಿ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳು ಸಹ ಅದರ ಜೀವಾಳ ವಾಗಿರುತ್ತಾರೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜು ಹಾಗೂ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ಅಲ್ಫಾಲಿಯೋ ಕಂಪನಿಯ ಜೋತೆ ಒಪ್ಪಂದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ನಮ್ಮ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ ಕಾಲೇಜಿನಲ್ಲಿ ಅಭ್ಯಾಸ ಮಾಡಿ ಇಂದು ವಿದೇಶಗಳಲ್ಲಿ ಅನೇಕ ಸಾಧನೆ ಮಾಡಿ ಜೀವನ ನಡೆಸುತ್ತಿರುವ ಅನೇಕ ವಿದ್ಯಾರ್ಥಿಗಳನ್ನು ನಾವು ನೋಡಬಹುದು. ಇಂತಹ ಸಾಧನಾ ಶಿಖರವೇರಿದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ 4 ವಿದ್ಯಾರ್ಥಿಗಳು ಇಂದು ತಾವು ಅಭ್ಯಾಸ ಮಾಡಿದ ಈ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜಿನಲ್ಲಿಯೆ ತಮ್ಮ ಸ್ಟ್ರಾರ್ಟ್ಅಪ್ ಕಂಪನಿ ಪ್ರಾರಂಭಿಸಿರುವದು ಪ್ರಶಂಸನಿಯ ಎಂದರು.

ಇವರು ನಮ್ಮ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಲ್ಪಾಲಿಯೋ ಕಂಪನಿಯ ಸ್ಥಾಪಕರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದನ ಮಿಸ್ಕೀನ್ ಮಾತನಾಡಿ, ನಮ್ಮ ಅಲ್ಫಾಲಿಯೋ ಕಂಪನಿಯು 2021 ರಲ್ಲಿ ಆಸ್ಟ್ರೇಲಿಯಾದ ಸಿಡ್ನಿ ಹಾಗೂ ಭಾರತದ ಹೈದರಾಬಾದ್ ನಲ್ಲಿ ಕಾರ್ಯಾರಂಭ ಮಾಡಿತು. ಈ ಕಂಪನಿಯು ಡಿಜಿಟಲ್ ಕ್ಷೇತ್ರದಲ್ಲಿ ಗ್ರಾಹಕ ಸಂಬಂಧ ನಿರ್ವಹಣೆ ‌ಹಾಗೂ ಸಮಸ್ಯೆಗಳ ಪರಿಹಾರ ಒದಗಿಸುತ್ತದೆ. ಸೇಲ್ಸ್ ಪೋರ್ನ್ ಪಾಲುದಾರರಾಗಿರುವ ನಮ್ಮ ಸಂಸ್ಥೆಯು ಸೇಲ್ಸ್ ಪೋರ್ನ್ ಪ್ಲಾಟ್ ಫಾರ್ಮ್ ಮತ್ತು ಸಂಬಂಧಿತ ತಂತ್ರಜ್ಞಾನಗಳಲ್ಲಿ ಪರಿಣಿತಿ ಹೊಂದಿದೆ‌ ಅಷ್ಟೇ ಅಲ್ಲದೆ ದೊಡ್ಡ ದೊಡ್ಡ ಉದ್ಯಮಗಳ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದು ಸಮಸ್ಯೆಗೆ ಪರಿಹಾರ ಸೂಚಿಸುತ್ತದೆ. ಹೀಗೆ ಡಿಜಿಟಲ್ ಕ್ಷೇತ್ರದ ಹತ್ತು ಹಲವಾರು ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಕಂಪನಿ ನಮ್ಮದಾಗಿದೆ ಎಂದು ಹೇಳಿದರು.

ಸಿಡ್ನಿ, ಹೈದರಾಬಾದ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಂಪನಿಯ ನಾವೆಲ್ಲರೂ ನಾವು ಅಭ್ಯಾಸ ಮಾಡಿದ ನಮ್ಮ ಪಿಡಿಎ ಕಾಲೇಜಿನ ವಿದ್ಯಾರ್ಥಿಗಳಿಗೆ ಏನಾದರೂ ನಮ್ಮಿಂದ ಸಹಾಯ ಮಾಡಬೇಕು ಎಂದು ಇಂದು ನಮ್ಮ ಕಂಪನಿಯ ವಿಭಾಗವನ್ನು ಇಲ್ಲಿಯೆ ಆರಂಭಿಸಲು ಯೋಚನೆ ಮಾಡಿದೆವು ಇದಕ್ಕೆ ಪ್ರಸ್ತುತ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರ ಸಹಕಾರ ಹಾಗೂ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರು ಹಾಗೂ ಎಲ್ಲ ಸಿಬ್ಬಂದಿಗಳ ಪ್ರೋತ್ಸಾಹ ದೊರೆಯಿತು. ಆರಂಭಿಕ ವಾಗಿ ನಾವು 275 ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಇಂಟರ್ವ್ಯೂ ಮಾಡಿ ಅದರಲ್ಲಿ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡೆವು ಇಂದು ಅವರಿಗೆ ಆದೇಶ ಸಹ ನೀಡಿದ್ದೇವೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ 6 ತಿಂಗಳು ಸ್ಟೈಫಂಡ ಸಮೇತ ತರಭೇತಿ ನಿಡಲಾಗುವದು ತರಭೇತಿ ಮುಗಿದ ನಂತರ ಅವರಿಗೆ ಸಂಬಳ ಸಮೇತ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಅರುಣಕುಮಾರ ಪಾಟೀಲ್, ಡಾ ಮಹಾದೇವಪ್ಪ ರಾಂಪೂರೆ, ಸಾಯಿನಾಥ ಪಾಟೀಲ್, ಡಾ ಅನೀಲಕುಮಾರ ಪಟ್ಟಣ, ಡಾ ಕಿರಣ್ ದೇಶಮುಖ್ ,ಅನಿಲ ಕುಮಾರ್ ಮರಗೋಳ, ನಾಗಣ್ಣ ಘಂಟಿ, ಅಲ್ಪಾಲಿಯೋ ಕಂಪನಿಯ ಚೆನ್ನಯ್ಯ ಹಡಗಿಲಮಠ, ಶರಣು ಮಾಲಿಪಾಟೀಲ, ಜಗದೀಶ್, ಪುಷ್ಪ ಹಾಗೂ

ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್, ಉಪ ಪ್ರಾಚಾರ್ಯರಾದ ಡಾ ಎಸ್ ಆರ್ ಹೊಟ್ಟಿ, ಡಾ ಭಾರತಿ ಹರಸೂರ, ಡಾ ನಾಗೇಂದ್ರ ಎಚ್, ಡಾ ನಾಗೇಶ್ ಸಾಲಿಮಠ ಹಾಗೂ ಸಿದ್ಧರಾಮ ಸಂಗೋಳ್ಗಿ ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಹಲಕಟ್ಟಾ ಶರೀಫ್‍ನಲ್ಲಿ ಉರುಸ್-2025 ಪ್ರಯುಕ್ತ ವಿಶೇಷ ರೈಲು ಸಂಚಾರ 

ಕಲಬುರಗಿ: ಹಲಕಟ್ಟಾ ಶರೀಫನಲ್ಲಿ (ಉರ್ಸ್-ಎ-ಶರೀಫ್) ಉರುಸ್ 2025ರ ಪ್ರಯುಕ್ತ ಕೆಳಕಂಡ ದಿನಾಂಕಗಳಂದು...

ಕಲಬುರಗಿ| ರೈತರ ಒಗ್ಗಟ್ಟಿನಿಂದ ಹಕ್ಕು ಮತ್ತು ನ್ಯಾಯಕ್ಕಾಗಿ ಹೋರಾಟ: ಭೀಮಾಶಂಕರ ಮಾಡಿಯಾಳ

ಕಲಬುರಗಿ: ರೈತರ ಹಿತಾಸಕ್ತಿಗಳನ್ನು ಕಾಪಾಡಲು ಒಗ್ಗಟ್ಟಿನ ಬಲವನ್ನು ತಂದುಕೊಳ್ಳುವುದು ಇಂದಿನ ಅಗತ್ಯವಾಗಿದೆ....

ಕಲಬುರಗಿ| ಜುಲೈ ಮಾಸಾಂತ್ಯಕ್ಕೆ ಜಿಲ್ಲಾ ಕಸಾಪದಿಂದ ಯುವ ಸಾಹಿತ್ಯ ಸಮ್ಮೇಳನ: ವಿಜಯಕುಮಾರ ಪಾಟೀಲ ತೇಗಲತಿಪ್ಪಿ

ಕಲಬುರಗಿ : ಯುವ ಬರಹಗಾರರಿಗೆ ಸ್ಫೂರ್ತಿ ನೀಡಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ...

ಕಲಬುರಗಿ| ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಹತ್ಯೆಗೈದು ನದಿಗೆ ಎಸೆದಿದ್ದ ಮೂವರ ಆರೋಪಿಗಳ ಬಂಧನ: ಪೊಲೀಸ್ ಕಮಿಷನರ್

ಕಲಬುರಗಿ: ವ್ಯಕ್ತಿಯೊಬ್ಬ ಕಾಣೆಯಾದ ಪ್ರಕರಣ ದಾಖಲಿಸಿಕೊಂಡ ಸ್ಟೇಶನ್ ಬಜಾರ್ ಪೊಲೀಸರು, ಕ್ಷೀಪ್ರ...