ಕಲಬುರಗಿ: ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಮೂಲತಃ ಬಿಜೆಪಿಗರಲ್ಲ, ಅವರು ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದವರಾಗಿದ್ದಾರೆ, ಅವರದ್ದು ಕೊಳಕು ಬುದ್ದಿ, ಕೊಳಕು ಮನಸ್ಸು ಹಾಗೂ ಕೊಳಕು ನಾಲಿಗೆ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ಎಮ್ ಎಲ್ ಸಿ ರವಿಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರವಿಕುಮಾರ್ ಆರ್ ಎಸ್ ಎಸ್ ಶಾಖೆಯಿಂದ ಬಂದವರು, ಆರ್ ಎಸ್ ಎಸ್ ನಲ್ಲಿ ಮನುಸ್ಮೃತಿ ಮನಸ್ಥಿತಿ ಇದೆ, ರವಿಕುಮಾರ್ ಅವರಿಗೆ ಮುಂಚೆಯಿಂದ ಬಾಯಿ ಚಪಲ ಇದೆ, ಕಲಬುರಗಿಗೆ ಬಂದು ಬಾಯಿಗೆ ಬಂದ ಹಾಗೆ ಮಾತಾಡಿದ್ದಾರೆ, ಕಲಬುರಗಿ ಡಿಸಿ ಬಗ್ಗೆ ಹೇಳಿದಾಗ ಕೋರ್ಟ್ ಛೀಮಾರಿ ಹಾಕ್ತು ಕ್ಷಮೆ ಕೇಳಿ ಬನ್ನಿ ಅಂತಾ ಹೇಳ್ತು, ಆದರೆ ಇನ್ನೂವರೆಗೂ ರವಿಕುಮಾರ್ ಜಿಲ್ಲಾಧಿಕಾರಿಯ ಕ್ಷಮೆ ಕೇಳಿಲ್ಲ ಎಂದರು.
ಆರ್ ಎಸ್ ಎಸ್ ಮನುಸ್ಮೃತಿ ಬಿಜೆಪಿ ಮುಖಂಡರು ತಮ್ಮ ಮನೆಯಲ್ಲಿ ಜಾರಿಗೆ ತರಲಿ:
ಮನುಸ್ಮೃತಿಯನ್ನು ಮಹಿಳೆಯರನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೇ. ಇದೇ ಆರ್ ಎಸ್ ಎಸ್ ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ತಮ್ಮ ಮನೆಯಲ್ಲಿ ಜಾರಿಗೆ ತರಲಿ ಎಂದು ಸವಾಲು ಹಾಕಿದ್ದಾರೆ.
ನಾನು ಬ್ಯಾನ್ ಆರ್ ಎಸ್ ಎಸ್ ಬ್ಯಾನ್ ಮಾಡ್ತಿನಿ ಅಂತಾ ಹೇಳಿಲ್ಲ, ಮೂರು ಸಲ ಆರ್ ಎಸ್ಎಸ್ ಬ್ಯಾನ್ ಆಗಿತ್ತು. ಬ್ಯಾನ್ ತೆಗೆದು ತಪ್ಪು ಮಾಡಿದ್ವಿ ಅಂತಾ ಹೇಳಿದ್ದೇನೆ. ನಾವು ಅಧಿಕಾರಕ್ಕೆ ಬಂದ್ರೆ ಬ್ಯಾನ್ ಮಾಡೋಣ ತಗೋಳಿ, ಅಷ್ಟು ಯಾಕೆ ತರಾತುರಿ ? ಅವರಿಗೆ ಜೈಲಿಗೆ ಹೋಗೋಕೆ ಎಂದು ಛೇಡಿಸಿದರು.
ಆರ್ ಎಸ್ ಎಸ್ ಬ್ಯಾನ್ ಮಾಡಲು 10 ಕಾರಣ ಕೊಡಿ ಎನುವ ಬಿಜೆಪಿಗರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಖರ್ಗೆ, ಆರ್ ಎಸ್ ಎಸ್ ನವರು 100 ವರ್ಷದಲ್ಲಿ ದೇಶದ ಸಬಲೀಕರಣಕ್ಕಾಗಿ ಮಾಡಿದ 10 ಒಳ್ಖೆಯ ಕೆಲಸ ಹೇಳಲಿ ಎಂದು ಸವಾಲು ಎಸೆದಿದ್ದಾರೆ.
ಆರ್ ಎಸ್ ಎಸ್ ನವರಿಗೆ ಎಲ್ಲಿಂದ ಹೇಗೆ ಹಣ ಬರ್ತಾಯಿದೆ ಎನ್ನುವುದು ನನಗೆ ಗೊತ್ತು. ನಾವು ಯಾವಾಗ 3 ಫಿಗರ್ ಮಾಕ್೯ ಬರುತ್ತೆ, ಆ ದಿನ ಐಟಿ, ಇಡಿ ಯವರನ್ನ ನಾನು ಅಲ್ಲಿಗೆ(ಆರ್ ಎಸ್ಎಸ್) ಬಳಿ ಕಳುಹಿಸುತ್ತೆನೆ ಎಂದ ಅವರು, ಆರ್ ಎಸ್ ಎಸ್ ಚೈಲಾ ಬಿಜೆಪಿಯಲ್ಲಿದ್ದಾರೆ ಎಂದು ಹೇಳಲು ನಾನು ಹೆದರುವದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಶ್ಲೀಲ ಮಾತನಾಡಿದರೆ ನೇಣು ಹಾಕಿಕೊಳ್ಳುತ್ತೇನೆ ಎಂಬ ರವಿಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಾಗಿದ್ರೆ ರವಿಕುಮಾರ್ ಅವರಿಗೆ ಹಗ್ಗ ಕೊಡಿ ಎಂದು ಲೇವಡಿ ಮಾಡಿದ ಸಚಿವರು, ತಮ್ಮ ಹೇಳಿಕೆ ಬಗ್ಗೆ ಸಮರ್ಥನೆ ಬೇರೆ ಮಾಡಿಕೊಳ್ಳುವ ರವಿಕುಮಾರ್ ಗೆ ನಾಚಿಕೆ ಆಗಬೇಕು, ವಿಡಿಯೋದಲ್ಲೇ ಎಲ್ಲಾ ಇದೆ, ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಪ್ರಶ್ನಿಸಿದರು.
ಆರ್ ಎಸ್ ಎಸ್ ಆಂಟಿ ನ್ಯಾಷನಲ್ ಸಂಘಟನೆ, ಹೀಗಂತ ಅಂಬೇಡ್ಕರ್ ಅವರೇ ಹೇಳಿದ್ದಾರೆ, ಪ್ರಸ್ತುತ ವಿಷಯದಲ್ಲಿ ಯಾರು ಕೋಮು ಬೀಜ ಬಿತ್ತುತ್ತಿದ್ದಾರೆ? ಯಾರು ಒನ್ ರಿಲಿಜನ್ ಒನ್ ನೇಷನ್ ಎನ್ನುತ್ತಿದ್ದಾರೆ. ಇಂತವರನ್ನ ಅಂಬೇಡ್ಕರ್ ಅವರು ದೇಶದ್ರೋಹಿಗಳು ಎಂದಿದ್ದಾರೆ ಎಂದು ತಿಳಿಸಿದರು.