ಕಲಬುರಗಿ| ಆಶಾಢ ಮಾಸ ಹಿನ್ನೆಲೆ: ಪಂಢರಾಪುರಕ್ಕೆ 80 ವಿಶೇಷ ರೈಲುಗಳು ಸಂಚಾರ 

Date:

Share post:

ಕಲಬುರಗಿ: ಆಶಾಢ ಮಾಸ-2025 ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಪಕ್ಕದ ರಾಜ್ಯದಿಂದ ಪಂಡರಪುರಕ್ಕೆ ಹೋಗುವ ಯಾತ್ರಾರ್ಥಿ/ಭಕ್ತಾದಿಗಳ ಅನುಕೂಲಕ್ಕಾಗಿ 80 ವಿಶೇಷ ರೈಲುಗಳು ಪಂಢರಾಪುರ ಹಾಗೂ ಪಂಢರಾಪುರ ಮಾರ್ಗವಾಗಿ ಸಂಚರಿಸಲಿವೆ ಕೇಂದ್ರ ರೈಲ್ವೆ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಗುಪುರ-ಮಿರಜ್ ವಿಶೇಷ ರೈಲು (ರೈಲು ಸಂಖ್ಯೆ-01205, 01206): ಈ ವಿಶೇಷ ರೈಲು ಜುಲೈ 4 ಮತ್ತು 5 ರಂದು ನಾಗಪುರದಿಂದ ಮೀರಜ್‍ಗೆ ಹಾಗೂ ಜುಲೈ 5 ಮತ್ತು 6 ರಂದು ಮೀರಜ್‍ದಿಂದ ನಾಗಪುರಕ್ಕೆ ಸಂಚರಿಸಲಿದೆ.

ಹೊಸ ಅಮರಾವತಿ-ಪಂಢರಪುರ ವಿಶೇಷ ರೈಲು: (ರೈಲು ಸಂಖ್ಯೆ 01119, 01120 ) ಜುಲೈ 2 ಮತ್ತು 5 ರಂದು ಅಮರಾವತಿಯಿಂದ ಪಂಢರಾಪುಕ್ಕೆ ಹಾಗೂ ಜುಲೈ 14, 17 ಪಂಢರಾಪುರದಿಂದ ಅಮರಾವತಿಗೆ ಸಂಚರಿಸಲಿದೆ.

ಖಮಗಾಂವ್-ಪಂಢರಪುರ ವಿಶೇಷ ರೈಲು (ರೈಲು ಸಂಖ್ಯೆ 01121, 01122): ಈ ವಿಶೇಷ ರೈಲು ಜುಲೈ 3, 6 ರಂದು ಖಮಗಾಂವ್‍ದಿಂದ ಪಂಢರಾಪುರಕ್ಕೆ ಹಾಗೂ ಜುಲೈ 4, 7 ರಂದು ಪಂಢರಾಪುರದಿಂದ ಖಮಗಾಂವ್‍ಗೆ ಸಂಚರಿಸಲಿದೆ.

ಭೂಸಾವಲ್-ಪಂಢರಪುರ್ ಅನ್‍ರಿಸವ್ರ್ಡ್ ವಿಶೇಷ ರೈಲು (ರೈಲು ಸಂಖ್ಯೆ 01159, 01160): ಈ ವಿಶೇಷ ರೈಲು ಜುಲೈ 5 ರಂದು ಭೂಸಾವಲ್‍ದಿಂದ ಪಂಢರಾಪುರಕ್ಕೆ ಹಾಗೂ ಜುಲೈ 6 ರಂದು ಪಂಢರಾಪುರದಿಂದ ಭೂಸಾವಲ್‍ ಗೆ ಸಂಚರಿಸಲಿದೆ.

ಲಾತೂರ್-ಪಂಢರಪುರ್ ಅನ್‍ರಿಸವ್ರ್ಡ್ ವಿಶೇಷ ರೈಲು (ರೈಲು ಸಂಖ್ಯೆ 01101, 01102): ಜುಲೈ 2, 4, 7, 8, 9 ರಂದು ಲಾತೂರಿಂದ ಪಂಢರಾಪುರಕ್ಕೆ ಹಾಗೂ ಜುಲೈ 2, 4, 7, 8, 9 ಪಂಢರಾಪುರದಿಂದ ಲಾತೂರ್‍ ಗೆ ಸಂಚರಿಸಲಿದೆ.

ಮಿರಾಜ್-ಕಲಬುರಗಿ ಅನ್‍ರಿಸವ್ರ್ಡ್ ಸ್ಪೆಷಲ್ (ರೈಲು ಸಂಖ್ಯೆ 01107, 01108): ಈ ವಿಶೇಷ ರೈಲುಗಳು ಜುಲೈ 1 ರಿಂದ 10 ರವರೆಗೆ ಪ್ರತಿದಿನ ಮೀರಜ್‍ದಿಂದ ಕಲಬುರಗಿಗೆ ಹಾಗೂ ಕಲಬುರಗಿಯಿಂದ ಮೀರಜ್‍ಗೆ ಸಂಚರಿಸಲಿದೆ.

ಕೊಲ್ಹಾಪುರ-ಕುರ್ದುವಾಡಿ ಅನ್‍ರಿಸವ್ರ್ಡ್ (ರೈಲು ಸಂಖ್ಯೆ 01209, 01210) ವಿಶೇಷ ರೈಲು: ಜುಲೈ 1 ರಿಂದ 10 ರವರೆಗೆ ಪ್ರತಿದಿನ ಕೊಲ್ಹಾಪುರದಿಂದ ಕುರ್ದುವಾಡಿಗೆ ಹಾಗೂ ಕುರ್ದುವಾಡಿಯಿಂದ ಕೊಲ್ಹಾಪುರಕ್ಕೆ ಸಂಚರಿಸಲಿದೆ.

ಪುಣೆ-ಮಿರಾಜ್ ಅನ್‍ರಿಸವ್ರ್ಡ್ ವಿಶೇಷ ರೈಲುಗಳು (ರೈಲು ಸಂಖ್ಯೆ 01207, 01208): ಈ ರೈಲು ಜುಲೈ 3 ರಿಂದ 10 ರವರೆಗೆ ಪುಣೆಯಿಂದ ಮೀರಜ್‍ಗೆ ಹಾಗೂ ಮೀರಜ್‍ದಿಂದ ಪುಣೆಗೆ ಸಂಚರಿಸಲಿದೆ.

ವಿಶೇಷ ಶುಲ್ಕದ ಆಶಾಢ ವಿಶೇಷ ರೈಲು ಸಂಖ್ಯೆ 01205, 01206, 01119, 01120, 01121 ಮತ್ತು 01122 ಗಾಗಿ ಕಾಯ್ದಿರಿಸುವಿಕೆಗಳು 16.06.2025 ರಂದು ಎಲ್ಲಾ ಗಣಕೀಕೃತ ಮೀಸಲಾತಿ ಕೇಂದ್ರಗಳಲ್ಲಿ ಮತ್ತು www.irctc.co.in ವೆಬ್‍ಸೈಟ್‍ನಲ್ಲಿ ತೆರೆಯಲ್ಪಡುತ್ತವೆ. ಅದೇ ರೀತಿ ಆಶಾಢ ವಿಶೇಷ ರೈಲು ಸಂಖ್ಯೆ 01159, 01160, 01101, 01102, 01107, 01108, 01209, 01210, 01207 ಮತ್ತು 01208 ಅನ್‍ರಿಸವ್ರ್ಡ್ ರೈಲುಗಳಾಗಿ ಚಲಿಸುತ್ತವೆ.

ಪ್ರಯಾಣಿಕರು ಅನಾನುಕೂಲತೆಯನ್ನು ತಪ್ಪಿಸಲು ಟಿಕೇಟ್ ಪಡೆದು ಪ್ರಯಾಣಿಸಬೇಕು. ಕಾಯ್ದಿರಿಸದ ಬೋಗಿಗಳಿಗೆ ಬುಕಿಂಗ್‍ಗಾಗಿ ನಿಲ್ದಾಣಗಳಲ್ಲಿನ ಬುಕಿಂಗ್ ಕೌಂಟರ್‍ಗಳು ಮತ್ತು ಯು.ಟಿ.ಎಸ್. ಅಪ್ಲಿಕೇಶನ್ ಮೂಲಕವೂ ಮಾಡಬಹುದು. ಈ ವಿಶೇಷ ರೈಲುಗಳ ನಿಲುಗಡೆ ಸಮಯ ಮತ್ತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.inಗೆ ಭೇಟಿ ನೀಡಿ ಅಥವಾ ಎನ್.ಟಿ.ಇ.ಎಸ್. ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಪಡೆಯಬಹುದಾಗಿದೆ.

Share post:

spot_imgspot_img

Popular

More like this
Related

ಕಲಬುರಗಿ| ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಶರಬಸಪ್ಪ ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ,...

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....