ಕಲಬುರಗಿ: 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚಿನ ಅಂಕಗಳನ್ನ ಪಡೆದು ಕೀರ್ತಿ ತಂದಿರುವ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿಗಳಾದ ಫೌಝಿಯಾ ತರನ್ನುಮ್ ಅವರು ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು.
ಶನಿವಾರದಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿರುವ 10 ವಿಧ್ಯಾರ್ಥಿಗಳಾದ 625ಕ್ಕೇ 621 ಅಂಕ ಪಡೆದಿರುವ ಶರಣಬಸವೇಶ್ವರ ಫ್ರೌಢಶಾಲೆಯ ಅಂಕಿತ, ಅದೇ ಶಾಲೆಯ ಪೂರ್ವಾಶಾ ಮಾಲಿಪಾಟೀಲ, ಚಿಂಚೋಳಿ ಪಬ್ಲಿಕ್ ಸ್ಕೂಲ್ ರಾಗಿಣಿ ವೀರೇಂದ್ರ ಪಾಟೀಲ್, ಮಹಾಗಾಂವ್ ಕ್ರಾಸ್ ಸಮೀಪದ ಮೌಂಟ್ ವೇವ್ ಇಂಗ್ಲೀಷ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿನಿ ಸೌಮ್ಯ, ಶ್ರೀ ಬಸವ ಗುರುಕುಲ ಫ್ರೌಢಶಾಲೆಯ ಮಹಾಲಕ್ಷ್ಮೀ, 620 ಅಂಕಗಳನ್ನು ಗಳಿಸಿರುವ ಶರಣಬಸವೇಶ್ವರ ಫ್ರೌಢಶಾಲೆಯ ತನುಶ್ರೀ, ಸೇಂಟ್ ಮೇರಿಸ್ ಇಂಗ್ಲೀಷ ಮೀಡಿಯಂ ಸ್ಕೂಲ್ ನ ಪೂರ್ವಿ ಎಂ.ಎಸ್, ಚಿತ್ತಾಪೂರ ಹೆಬ್ಬಾಳ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಅಕ್ಷತಾ(619), ಎಸ್ ಆರ್ ಎನ್ ಮೆಹ್ತಾ ಇಂಗ್ಲೀಷ ಮೀಡಿಯಂ ಸ್ಕೂಲ್ ನ ಜಿ.ವಿ ದಯಾನಿಧಿ (619) ಅವರು ಸನ್ಮಾನವನ್ನು ಸ್ವೀಕರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೂರ್ಯಕಾಂತ್ ಮದಾನೆ ಹಾಗೂ ವಿದ್ಯಾರ್ಥಿಗಳ ಪಾಲಕರು, ಶಿಕ್ಷಕರು ಉಪಸ್ಥಿತರಿದ್ದರು.